ಬೆಂಗಳೂರು,ಮಾರ್ಚ್,3,2026 (www.justkannada.in): ಇರಾನ್ ಮೇಲೆ ಇಸ್ರೇಲ್ ,ಅಮೇರಿಕಾ ದಾಳಿ ಬೆನ್ನಲ್ಲೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಅಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು ಸೇರಿ ಭಾರತೀಯರನ್ನ ವಾಪಸ್ ತಾಯ್ನಾಡಿಗೆ ಕರೆ ತರಲು ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮಧ್ಯೆ ದುಬೈನಲ್ಲಿ ಸಿಲುಕಿಕೊಂಡಿದ್ದ ವಿಧಾನಪರಿಷತ್ ಸದಸ್ಯ ಬೋಜೇಗೌಡ ಅವರು ಅಲ್ಲಿನ ಪರಿಸ್ಥಿತಿ ಬಗ್ಗೆ ವಿವರಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಎಂಎಲ್ ಸಿ ಭೋಜೆಗೌಡ ” ನಾನು ದಕ್ಷಿಣ ಆಫ್ರಿಕಾಗೆ ಹೋಗಿದ್ದೆ, ಅಲ್ಲಿಂದ ಭಾರತಕ್ಕೆ ವಾಪಸ್ ದುಬೈ ಮೂಲಕ ಬರಬೇಕಿತ್ತು. ಆದರೆ ನನ್ನ ಫ್ಲೈಟ್ ತಡವಾಯಿತು. ಆಗ ಕಾರಣವನ್ನು ವಿಚಾರಿಸಿದಾಗ ಅಬುದಾಬಿಯಲ್ಲಿ ಬಾಂಬ್ ದಾಳಿ ಆಗುತ್ತಿದೆ ಎಂದರು, ಇದಾದ ಕೆಲ ಹೊತ್ತಿನಲ್ಲೇ ನಮ್ಮನ್ನು ಫ್ಲೈಟ್ ನಿಂದಲೇ ಇಳಿಸಿದರು. . ಆ ಕ್ಷಣದಲ್ಲಿ ನಾವು ಏನು ಮಾಡಬೇಕು ಅನ್ನೋದು ತಿಳಿಯಲಿಲ್ಲ. ನಾನು ನನ್ನ ಪತ್ನಿ ಬದುಕಿ ಬರುತ್ತೇವೆ. ಅಂದುಕೊಂಡಿರಲಿಲ್ಲ. ನಾವು ಭಾರತಕ್ಕೆ ಜೀವಂತ ಬರುತ್ತೇವೆ ಎಂದು ಕೊಂಡಿರಲಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ದೂರವಾಣಿ ಕರೆ ಮೂಲಕ ಧೈರ್ಯ ತುಂಬಿ ದುಬೈ ಹೋಟೆಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆಯನ್ನೂ ಮಾಡಿಕೊಟ್ಟರು. ಆದಾಗ್ಯೂ, ನನಗೆ ಅಲ್ಲಿನ ಪರಿಸ್ಥಿತಿಗಳಿಂದ ಆತಂಕ ಕಾಡುತ್ತಲೇ ಇತ್ತು ಇನ್ನು, ಸಿಎಂ ಸಿದ್ದರಾಮಯ್ಯ , ಸಚಿವರಾದ ಕೃಷ್ಣ ಭೈರೇಗೌಡ ನನ್ನನ್ನು ಸಂಪರ್ಕಿಸಿ ಪರಿಸ್ಥಿತಿ ಕುರಿತು ತಿಳಿದುಕೊಂಡರು. ಅಲ್ಲಿನ ಯುದ್ದವಾತಾವರಣದಿಂದ ನಾವು ಇಷ್ಟು ಬೇಗ ತಾಯ್ನಾಡಿಗೆ ಮರಳುತ್ತೇವೆ ಎಂದು ಊಹಿಸಿರಲಿಲ್ಲ ಎಂದು ಭೋಜೇಗೌಡ ಅವರು ತಮಗಾದ ಅನುಭವ ಹಂಚಿಕೊಂಡಿದ್ದಾರೆ.
Key words: MLC, Bhoje Gowda, situation, Dubai







