ಬೆಳಗಾವಿ,ಅಕ್ಟೋಬರ್,29,2025 (www.justkannada.in): ಡಿಕೆ ಶಿವಕುಮಾರ್ ಸಿಎಂ ಆಗಲ್ಲ. ಸತೀಶ್ ಜಾರಕಿಹೊಳಿಯೂ ಸಿಎಂ ಆಗಲ್ಲ. ರಾಜ್ಯದ ಸಾರಥ್ಯ ಬ್ಲಾಕ್ ಹಾರ್ಸ್ ಗೆ ಸಿಗಲಿದೆ. ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಲಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್ ಸಿಡಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಯತ್ನಾಳ್, ಮಲ್ಲಿಕಾರ್ಜುನ ಖರ್ಗೆ ಒಮ್ಮೆಯಾದರೂ ಸಿಎಂ ಆಗಬೇಕು ಎಂದು ಕಾಯುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರಾಗಿರುವವರು ಒಮ್ಮಯಾದರೂ ಸಿಎಂ ಆಗಬೇಕೆಂದು ಆಸೆ ಇದೆ. ಎಐಸಿಸಿ ಅಧ್ಯಕ್ಷರಿಗೆ ಏನು ಕೆಲಸ ಇಲ್ಲ. ಹೀಗಾಗಿ ಖರ್ಗೆ ಒಮ್ಮೆಯಾದರೂ ಸಿಎಂ ಆಗಬೇಕು ಎಂದು ಆಸೆ ಪಟ್ಟಿದ್ದಾರೆ. ಖರ್ಗೆ ರಾಜ್ಯದ ಸಿಎಂ ಆಗಲಿದ್ದಾರೆ. ಸ್ಪರ್ಧೆಯಲ್ಲಿರುವ ಯಾವ ನಾಯಕರೂ ಸಿಎಂ ಆಗಲ್ಲ ಡಿಕೆ ಶಿವಕುಮಾರ್ ಸಿಎಂ ಆಗಲ್ಲ ಸತೀಶ್ ಜಾರಕಿಹೊಳಿ ಸಿಎಂ ಆಗಲ್ಲ ಎಂದರು.
ಸಿಎಂ ಸಿದ್ದರಾಮಯ್ಯ ಪುತ್ರನ ಮೂಲಕ ಬೆಳಗಾವಿಗೆ ಬಂದು ಸತೀಶ್ ಹೆಸರು ಹೇಳಿಸಿದ್ರು ಡಿಕೆ ಸಿಎಂ ಮಾಡಿದ್ರೆ ನಮ್ಮ ಕಡೆಯಿಂದ ಸತೀಶ್ ಮಾಡಬೇಕೆಂದು ಹೇಳಿಸಿದ್ರು ಸಿದ್ದರಾಮಯ್ಯ ಯತೀಂದ್ರ ಮೂಲಕ ಸತೀಶ್ ಹೆಸರು ಹೇಳಿಸುತ್ತಿದ್ದಾರೆ ಎಂದು ಯತ್ನಾಳ್ ತಿಳಿಸಿದರು.
Key words: leadership, become, CM, says ,MLA, Yatnal







