ಪಾದಯಾತ್ರೆ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರಕ್ಕೆ ಸೂಚಿಸಿದ ಶಾಸಕ ಟಿ.ಎಸ್ ಶ್ರೀವತ್ಸ.

ಮೈಸೂರು,ಆಗಸ್ಟ್,8,2023(www.justkannada.in): ಕೆಆರ್ ಕ್ಷೇತ್ರದ ಶಾಸಕ ಟಿ.ಎಸ್ ಶ್ರೀ ವತ್ಸ ಅವರು ಇಂದು ಕ್ಷೇತ್ರದಲ್ಲಿ ಪಾದಯಾತ್ರೆ ಮೂಲಕ ಸಾರ್ವಜನಿಕರ ಸಮಸ್ಯೆ ಆಲಿಸಿ ಸ್ಥಳದಲ್ಲೇ ಪರಿಹಾರ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ನಗರದ ವಾರ್ಡ್ ನಂಬರ್ 49  ವ್ಯಾಪ್ತಿಯ ಗುರಿಕಾರ್ ದೇವಯ್ಯ ರಸ್ತೆ, ಬಸವೇಶ್ವರ ರಸ್ತೆ, ಕುದೇರ್ ಮಠದ ರಸ್ತೆ, ಅಗ್ರಹಾರ, ನೂರೊಂದು ಗಣಪತಿ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭೇಟಿ ನೀಡಿದ ಶಾಸಕ ಟಿ.ಎಸ್ ಶ್ರೀವತ್ಸ ಅವರು  ಸಾರ್ವಜನಿಕರ ಸಮಸ್ಯೆಗಳ ಆಲಿಸಿ ಪರಿಹಾರಕ್ಕೆ ಸ್ಥಳದಲ್ಲಿಯೇ ಅಧಿಕಾರಿಗಳಿಗೆ ಪರಿಹಾರಕ್ಕೆ  ಸೂಚಿಸಿದರು.

ಬಸವೇಶ್ವರ ರಸ್ತೆಯಯ ಭಾಗದ ಎರಡನೇ ಕ್ರಾಸ್ ಗೆ 35 ಲಕ್ಷ ರೂ. ಹಾಗೂ ಚಾವಡಿ ಬೀದಿ ಅಡ್ಡರಸ್ತೆಗೆ 25 ಲಕ್ಷ ರೂ. ಅನುದಾನ ಪಡೆಯಲಾಗಿದೆ. ಅಗ್ರಹಾರದ ಸುತ್ತಮುತ್ತ  ಸ್ಕೂಟರ್ ಗಳಲ್ಲಿ ವೀಲಿಂಗ್ ಹಾಗೂ ಅತಿ ವೇಗವಾಗಿ ಚಾಲನೆ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ  ಯುವಕರ ವಿರುದ್ಧ ಕೂಡಲೇ ಶಿಸ್ತು ಕ್ರಮ ಕೈಗೊಳ್ಳಬೇಕೆಂದು  ಪೋಲಿಸರಿಗೆ ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಸೌಮ್ಯ ಉಮೇಶ್, ಅರುಣ್,ಗುರುದತ್, ಶಂಕರ್ ಸಿಂಗ್, ದೀನ ಮಣಿ, ಅನ್ನಪೂರ್ಣ,ಕಿ ಶೋರ್, ಉಷಾ,ಶಂಕರ್,ಉಮೇಶ್, ಅಂಜು, ಮುಂತಾದವರು ಉಪಸ್ಥಿತರಿದ್ದರು.

Key words: MLA -TS Srivatsa- listened – public -problems – solution-mysore