ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಪ್ರಕರಣ: ಎಸ್‌ ಡಿಪಿಐ ಭಾಗಿ ಬಗ್ಗೆ ಸಾಭೀತಾದ್ರೆ ಸರ್ಕಾರವೇ ಕ್ರಮ ವಹಿಸಲಿ-ಮಾಜಿ ಸಚಿವ ಯುಟಿ ಖಾದರ್…

ಮೈಸೂರು,ನ,21,2019(www.justkannada.in): ಶಾಸಕ ತನ್ವೀರ್ ಸೇಠ್ ಶೀಘ್ರ ಸಂಪೂರ್ಣ ಗುಣಮುಖರಾಗಲೆಂದು ಪ್ರಾರ್ಥಿಸುವೆ ಎಂದು ಮಾಜಿ ಸಚಿವ ಯು.ಟಿ ಖಾದರ್ ತಿಳಿಸಿದರು.

ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಭೇಟಿ ನೀಡಿ ತನ್ವೀರ್‌ ಆರೋಗ್ಯ ವಿಚಾರಿಸಿದ ಬಳಿಕ ಮಾತನಾಡಿದ ಮಾಜಿ ಸಚಿವ ಯುಟಿ.ಖಾದರ್, ಸರ್ವ ಧರ್ಮಿಯರ ಪ್ರಾರ್ಥನೆಯಿಂದ ಅವರು ಚೇತರಿಸಿಕೊಂಡಿದ್ದಾರೆ. ಶೀಘ್ರ ಸಂಪೂರ್ಣ ಗುಣಮುಖರಾಗಲು ದೇವರಲ್ಲಿ ಪ್ರಾರ್ಥಿಸುವೆ ಎಂದರು.

ಕೊಲೆ ಯತ್ನದಲ್ಲಿ ಎಸ್‌ಡಿಪಿಐ ಸಂಘಟನೆ ಕೈವಾಡ ಶಂಕೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು,  ಇದನ್ನು ಸರ್ಕಾರ ಆಧಾರ ಸಮೇತ ಸಾಭೀತು ಪಡಿಸಬೇಕು. ಯಾರೇ ವ್ಯಕ್ತಿ ಅಥವಾ ಸಂಘಟನೆ ಹಿಂಸಾತ್ಮಕ ಕೃತ್ಯ ಮಾಡೋದು ಸರಿಯಲ್ಲ. ಒಂದು ವೇಳೆ ಸಂಘಟನೆ ಭಾಗಿ ಬಗ್ಗೆ ಸಾಭೀತಾದರೆ ಸರ್ಕಾರವೇ ಕ್ರಮ ವಹಿಸಲಿ. ಅದರಲ್ಲಿ ನಾನು ಹೇಳುವುದು ಏನೂ ಇಲ್ಲ ಎಂದು ತಿಳಿಸಿದರು.

ಕರ್ನಾಟಕದ ಉಪಚುನಾವಣೆಯನ್ನ ದೇಶವೆ ನೋಡುತ್ತಿದೆ. ಸುಪ್ರೀಂ ಕೋರ್ಟ್ 17 ಜನರನ್ನ ನೀವು ಶಾಸಕರಾಗಲು ಅರ್ಹರಲ್ಲ ಅಂತ ಹೇಳಿ ಜನರ ಮುಂದೆ ಕಳುಹಿಸಿದ್ದಾರೆ.ಇದೀಗಾ ರಾಜ್ಯದ ಮತದಾರರ ಮರ್ಯಾದೆ ದೇಶದಲ್ಲಿ ಉಳಿಸಬೇಕಿದೆ.ಜನ ಕಾಂಗ್ರೆಸ್ ಅಭ್ಯರ್ಥಿಗಳನ್ನ ಗೆಲ್ಲಿಸುವ ವಿಶ್ವಾಸವಿದೆ.ಚುನಾವಣೆಯಲ್ಲಿ ತನ್ವೀರ್ ಸೇಠ್ ಕೊರತೆ ಕಾಣುತ್ತಿದೆ. ಆದ್ರು ಅವರ ಸಲಹೆ ಪಡೆದು ಬೆಂಬಲಿಗರೊಂದಿಗೆ ಸಾಮೂಹಿಕ ಪ್ರಚಾರ ನಡೆಸುತ್ತೇವೆ ಎಂದು ಯುಟಿ ಖಾದರ್ ತಿಳಿಸಿದರು.

key words: MLA -Tanveer Seth -prays – recovery-Former Minister- UT Khadar