ಮೈಸೂರು,ನವೆಂಬರ್,22,2025 (www.justkannada.in): ಅಧಿಕಾರ ಹಂಚಿಕೆ ಗೊಂದಲವನ್ನ ಪಕ್ಷದ ಹೈಕಮಾಂಡ್ ಎರಡು ದಿನಗಳಲ್ಲಿ ಬಗೆಹರಿಸಲಿದೆ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್, ನಮ್ಮ ಹೈಕಮಾಂಡ್ ಮೊದಲೇ ತಮ್ಮ ನಿಲುವನ್ನ ಸ್ಪಷ್ಟಪಡಿಸಬೇಕಿತ್ತು. ಅಧಿಕಾರ ಹಂಚಿಕೆ ವಿಚಾರದಲ್ಲಿ ಸ್ಪಷ್ಟಪಡಿಸಬೇಕಿತ್ತು. ಅದು ತಡವಾಗಿದೆ. ಅಧಿಕಾರ ಹಂಚಿಕೆ ವಿಚಾರವಾಗಿ ಒಪ್ಪಂದ ಆಗಿದೆಯೋ?ಇಲ್ಲವೋ ಗೊತ್ತಿಲ್ಲ. ಆದರೆ ಈ ಗೊಂದಲ ಎರಡುವರೆ ವರ್ಷದಿಂದ ಮುಂದುವರೆದಿದೆ. ಅದು ಅಪಾಯಕಾರಿ ಹಂತ ತಲುಪುವ ಎಲ್ಲಾ ಲಕ್ಷಣ ಕಾಣುತ್ತಿದೆ. ಆದಷ್ಟು ಬೇಗ ಹೈಕಮಾಂಡ್ ತನ್ನ ನಿರ್ಧಾರ ಹೇಳಲಿದೆ ಈ ಎಲ್ಲಾ ಬೆಳವಣಿಗೆಯಿಂದ ಪಕ್ಷಕ್ಕೇನು ನಷ್ಟ ಇಲ್ಲ. ಆದರೆ ಗೊಂದಲ ಆಗಬಾರದು ಎಂದರು.
ಹೈಕಮಾಂಡ್ ನಾಯಕರ ಬಳಿ ಮಾತುಕತೆ ನಡೆದ ಸಂದರ್ಭದಲ್ಲಿ ಯಾರು ಇರಲಿಲ್ಲ. ಯಾರು ಮಾತು ಕೊಟ್ಟಿದ್ದಾರೆ? ಯಾರು ಮಾತು ಕೊಟ್ಟಿಲ್ಲ? ಯಾರು ಮಾತು ತಪ್ಪಿದ್ದಾರೆಂದು ಮಾತುಕತೆ ವೇಳೆ ಇದ್ದವರಿಗೆ ಗೊತ್ತು. ಕಾಂಗ್ರೆಸ್ ಶಾಸಕರ ಮುಂದೆ ಅಧಿಖಾರ ಹಂಚಿಕೆ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಶಾಸಕ ತನ್ವೀರ್ ಸೇಠ್ ತಿಳಿಸಿದರು.
Key words: Power sharing, confusion, High command, MLA, Tanveer Seth







