ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ, ಅವಕಾಶದ ನಿರೀಕ್ಷೆ ಇದೆ-ತನ್ವೀರ್ ಸೇಠ್

ಮೈಸೂರು,ಅಕ್ಟೋಬರ್,31,2025 (www.justkannada.in):  ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಚಿವ ಸ್ಥಾನದ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ತನ್ವೀರ್ ಸೇಠ್ ತಿಳಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಸೇಠ್,  ಕ್ರಾಂತಿಯ ಬಗ್ಗೆ ಸುಮ್ಮನೆ ಚರ್ಚೆ ನಡೆಯುತ್ತಿದೆ ಅಷ್ಟೆ ಪಕ್ಷದೊಳಗೆ ಈ ಬಗ್ಗೆ ಯಾವ ಚರ್ಚೆ ನಡೆಯುತ್ತಿಲ್ಲ. ಈ ತಿಂಗಳ ಅಂತ್ಯದಲ್ಲಿ ಸಂಪುಟ ವಿಸ್ತರಣೆ ಆಗಬಹುದು. ನಾನೂ ಸಹ ಸಚಿವ ಸ್ಥಾನದ ಆಕಾಂಕ್ಷಿ. ನನಗೂ ಸಚಿವ ಸ್ಥಾನದ ಅವಕಾಶ ಸಿಗಬಹುದೆಂಬ ನಿರೀಕ್ಷೆ ಇದೆ ಎಂದರು.

ನಾಯಕತ್ವ ಬಗ್ಗೆ ಯಾರೇ ಮಾತನಾಡಿದರೂ ವೈಯಕ್ತಿಕ ಹೇಳಿಕೆ  ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿಲ್ಲ.  ನಾಯಕತ್ವ ಬಗ್ಗೆ ಮಾತನಾಡಬಾರದು ಎಂದು ಹಯಕಮಾಂಢ್ ಸೂಚನೆ ನೀಡಿದೆ. ಶಾಸಕರ ಬೆಂಬಲ ಯಾರಿಗಾದರೂ ಇರಬಹುದು. ಹೈಕಮಾಂಡ್ ತೀರ್ಮಾನವೇ ಅಂತಿಮ ಎಂಎಲ್ ಸಿ ಯತೀಂದ್ರ ನೀಡಿದ ಹೇಳಿಕೆಯೂ ಅವರ ವೈಯಕ್ತಿಕ ಎಂದು ತಿಳಿಸಿದರು.

Key words: I am, aspirant, ministerial post, Tanveer Sait