ಮೈಸೂರು,ಸೆಪ್ಟಂಬರ್,3,2025 (www.justkannada.in): ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಬಿಜೆಪಿ ಧರ್ಮಸ್ಥಳ ಚಲೋ ಧರ್ಮಯಾತ್ರೆ ಕೈಗೊಂಡ ಬಳಿಕ ಇದೀಗ ಬಿಜೆಪಿಗೆ ಕೌಂಟರ್ ಕೊಟ್ಟಿರುವ ಕಾಂಗ್ರೆಸ್ ಮೈಸೂರಿನಿಂದ ಧರ್ಮಸ್ಥಳಕ್ಕೆ ಯಾತ್ರೆ ಕೈಗೊಂಡಿದೆ.
ಈ ನಡುವೆ ಈ ಕುರಿತು ಮಾತನಾಡಿರುವ ಶಾಸಕ ತನ್ವೀರ್ ಸೇಠ್, ಇದು ಕಾಂಗ್ರೆಸ್ ಯಾತ್ರೆ ಅಲ್ಲ. ಇದು ಭಕ್ತರ ವಿಜಯಯಾತ್ರೆ. ಬಿಜೆಪಿ ರಾಜಕೀಯ ಬೇಳೆ ಬೇಯಿಸಕೊಳ್ಳುತ್ತಿದೆ. ನಮ್ಮ ಸರ್ಕಾರ ಎಸ್ಐಟಿ ರಚನೆ ಮಾಡಿ ಸತ್ಯ ಹೊರ ತರುವ ಕೆಲಸ ಮಾಡಿದೆ. ಬಿಜೆಪಿ ಮೊದಲು ಎಸ್ಐಟಿಯನ್ನ ಸ್ವಾಗತಿಸಿದರು. ಈಗ ಎಸ್ ಐಟಿ ತನಿಖೆಗೆ ಆಕ್ಷೇಪಿಸಿದ್ದಾರೆ. ತನಿಖೆಯ ಮಧ್ಯ ಪ್ರವೇಶಿಸಿದ್ರು . ಬಿಜೆಪಿ ಜನರ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
Key words: BJP, hurting, people, sentiments, MLA, Tanveer Sait