ಬೆಂಗಳೂರು,ಏಪ್ರಿಲ್,11,2026 (www.justkannada.in): ನಾಳೆ ನಾಡಿದ್ದು ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಯಾಗಿ ಸಂಪುಟ ಪುನಾರಚನೆ ವೇಳೆ ಹಿರಿಯ ಶಾಸಕರನ್ನು ಪರಿಗಣಿಸುವಂತೆ ಮನವಿ ಮಾಡುತ್ತೇವೆ ಎಂದು ಶಾಸಕ ಟಿ.ಬಿ ಜಯಚಂದ್ರ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಟಿ.ಬಿ ಜಯಚಂದ್ರ, ಕಳೆದ ಅಧಿವೇಶನದ ವೇಳೆ ಹಿರಿಯ ಶಾಸಕರು ಸಭೆ ಸೇರಿದ್ದವು. ವರಿಷ್ಠರ ಗಮನಕ್ಕೆ ತರಬೇಕು ಎಂದು ನಿರ್ಧಾರ ಮಾಡಿದ್ದವು. ಈಗ ದಾವಣಗೆರೆ, ಬಾಗಲಕೋಟೆ ಉಪಚುನಾವಣೆ ಮುಗಿಯಿತು. ಹೀಗಾಗಿ ನಾಳೆ ನಾಡಿದ್ದು ನಾವೆಲ್ಲಾ ದೆಹಲಿಗೆ ಹೋಗುತ್ತೇವೆ. 38ರಿಂದ 40 ಶಾಸಕರು ದೆಹಲಿಗೆ ತೆರಳುವ ನಿರೀಕ್ಷೆ ಇದೆ. ಮಲ್ಲಿಕಾರ್ಜುನ ಖರ್ಗೆ ನಮ್ಮ ರಾಜ್ಯದವರೇ. ಸೋನಿಯಾ ಗಾಂಧಿ ರಾಹುಲ್ ಗಾಂಧಿ ಅವರನ್ನ ಭೇಟಿಯಾಗುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 3 ವರ್ಷವಾಗುತ್ತಿದೆ. ಸಂಪುಟ ಪುನಾರಚನೆ ವೇಳೆ ಹಿರಿಯರನ್ನು ಪರಿಗಣಿಸುವಂತೆ ಮನವಿ ಮಾಡುತ್ತೇವೆ ದೆಹಲಿಯಲ್ಲಿ ಹೈಕಮಾಂಡ್ ಭೇಟಿಯಾಗಿ ಮನವಿ ಮಾಡುತ್ತೇವೆ ಎಂದು ಶಾಸಕ ಟಿಬಿ ಜಯಚಂದ್ರ ತಿಳಿಸಿದರು.
Key words: Tomorrow, Delhi, MLA, T.B. Jayachandra







