ಬೆಂಗಳೂರು,ಜುಲೈ,22,2025 (www.justkannada.in): ಸಣ್ಣ ವ್ಯಾಪಾರಿಗಳಿಗೆ ವಾಣಿಜ್ಯ ತೆರಿಗೆ ಇಲಾಖೆ ನೋಟಿಸ್ ನೀಡಿರುವ ವಿಚಾರಕ್ಕೂ ಕೇಂದ್ರ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಾಸಕ ಹಾಗೂ ಮಾಜಿ ಸಚಿವ ಸುರೇಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯಗೆ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ಈ ಕುರಿತು ಸ್ವತಃ ಅವರೇ ಮಾಧ್ಯಮಗಳ ಜೊತೆ ಮಾತನಾಡಿದ್ದು, ಸಣ್ಣ ವ್ಯಾಪಾರಿಗಳು ಬ್ಯುಸಿನೆಸ್ ನಡೆಸಬೇಕೋ? ಬೇಡವೋ? ಎಂದು ಆತಂಕದಲ್ಲಿದ್ದಾರೆ. ವಾಣಿಜ್ಯ ತೆರಿಗೆ ಇಲಾಖೆ ಇರುವುದು ರಾಜ್ಯ ಸರ್ಕಾರದ ಕೆಳಗೆ. ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿ ದುರ್ಬವಾಗಿದ್ದಕ್ಕೆ ವಾಣಿಜ್ಯ ತೆರಿಗೆ ಇಲಾಖೆಗೆ ತೆರಿಗೆ ಸಂಗ್ರಹಕ್ಕೆ ಟಾರ್ಗೆಟ್ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಯಾವುದೇ ಜನಪರ ಸರ್ಕಾರ ಈ ರೀತಿ ನೋಟಿಸ್ ಕೊಡುವುದಿಲ್ಲ. ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಸಿಎಂ ಅನುಮತಿ ಪಡೆದು ನೋಟಿಸ್ ಕೊಡುತ್ತಿದ್ದಾರಾ ಏನು ಗೊತ್ತಿಲ್ಲ ಜಿಎಸ್ ಟಿ ನೋಟಿಸ್ ಗೂ ಕೇಂದ್ರ ಸರ್ಕಾರಕ್ಕೂ ಸಂಬಂಧ ಇಲ್ಲ ವಾಣಿಜ್ಯ ತೆರಿಗೆ ಇಲಾಖೆ ಶ್ರಮಜೀವಿಗಳಿಗೆ ಮರ್ಮಾಘಾತ ಕೊಡುತ್ತಿದೆ. ಸ್ವತಃ ಅರ್ಥಶಾಸ್ತ್ರಜ್ಞರಾದ ಸಿಎಂ ಇದರ ಬಗ್ಗೆ ತಿಳಿದುಕೊಳ್ಳಬೇಕು. ಇದು ಯಾವುದೇ ಪ್ರಗತಿಪರ ಸರ್ಕಾರ ಮಾಡುವ ಕೆಲಸ ಅಲ್ಲ . ಕೂಡಲೇ ರಾಜ್ಯ ಸರ್ಕಾರ ತನ್ನ ನಿರ್ಧಾರವನ್ನ ಹಿಂಪಡೆಯಬೇಕು ಎಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ.
Key words: GST, notice, small traders, MLA, Suresh Kumar