ಗಾಂಧಿ ಕುಟುಂಬಕ್ಕೆ ನಿಷ್ಠೆ ಆಗಲು ದೇಶದ ನಿಷ್ಠೆ ಕಳೆದುಕೊಳ್ಳಬೇಡಿ- ಶಾಸಕ ಸುನೀಲ್ ಕುಮಾರ್

ಬೆಂಗಳೂರು,ಆಗಸ್ಟ್,26,2025 (www.justkannada.in):  ಸದನದಲ್ಲಿ ಆರ್.ಎಸ್.ಎಸ್ ಗೀತೆ ಹಾಡಿದ್ದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿರುವ ಕುರಿತು  ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಸುನೀಲ್ ಕುಮಾರ್,  ಡಿ.ಕೆ.ಶಿವಕುಮಾರ್ ಕ್ಷಮೆ ಕೇಳಿದ್ದು ಬೇಸರವಾಗಿದೆ. ಗಾಂಧಿ ಕುಟುಂಬಕ್ಕೆ ನಿಷ್ಠೆ ಆಗಲು ದೇಶದ ನಿಷ್ಠೆ ಕಳೆದುಕೊಳ್ಳಬೇಡಿ ಎಂದು ಟಾಂಗ್ ಕೊಟ್ಟಿದ್ದಾರೆ.

ನೀವು ಗಾಂಧಿ ಕುಟುಂಬದ ಭಕ್ತರು ಅಲ್ಲ, ದೇಶದ ಭಕ್ತರಾಗಿ. ನಾನು ಆರ್.ಎಸ್.ಎಸ್ ವಿಠಲ ಶಾಖೆಗೆ ಹೋಗುತ್ತಿದ್ದೆ ಅಂತಾ ಹೇಳಿದ್ದರು. ಸದನದಲ್ಲಿ ಡಿ.ಕೆ.ಶಿವಕುಮಾರ್ ಆರ್.ಎಸ್.ಎಸ್ ಗೀತೆಯ ಎರಡು ಸಾಲು ಹೇಳಿದ್ದಕ್ಕೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಇನ್ನು ಪೂರ್ತಿ ಗೀತೆ ಹೇಳಿದ್ದರೆ ಇನ್ನೇನು ಆಗುತ್ತಿತ್ತೋ? ಡಿ.ಕೆ.ಶಿವಕುಮಾರ್  ಅಧಿಕಾರದ ಆಸೆಯಿಂದ ಕ್ಷಮೆ ಕೇಳಿದ್ದಾರೆ ಎಂದು ಟೀಕಿಸಿದರು.

Key words: MLA, Sunil Kumar, RSS, DCM, DK Shivakumar