ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ್ದೇ ಸರ್ಕಾರ-ಶಾಸಕ ಸುನೀಲ್ ಕುಮಾರ್ ಆರೋಪ

ಬೆಂಗಳೂರು,ಆಗಸ್ಟ್,18,2025 (www.justkannada.in):  ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಮಾಡಿದ್ದೇ ಸರ್ಕಾರ ಎಂದು ಬಿಜೆಪಿ ಶಾಸಕ ಗಂಭೀರ ಆರೋಪ ಮಾಡಿದರು.

ಇಂದು ವಿಧಾನಸಭೆ ಕಲಾಪದಲ್ಲಿ ಧರ್ಮಸ್ಥಳ ಪ್ರಕರಣ ಕುರಿತು ಭಾರೀ ಚರ್ಚೆಯಾಯಿತು. ಸದನದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಉತ್ತರ ನೀಡಿದರು. ಈ ನಡುವೆ ಸದನದಲ್ಲಿ ಮಾತನಾಡಿದ ಬಿಜೆಪಿ ಶಾಸಕ ಸುನೀಲ್ ಕುಮಾರ್,  ಎಸ್ ಐಟಿ ತನಿಖೆ ಗೆ ವಿರೋಧವಿಲ್ಲ. ಆದರೆ ಧರ್ಮಸ್ಥಳ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವ ಷಡ್ಯಂತ್ರ ನಡೆದಿದೆ. ಸರ್ಕಾರವೇ ಅಪಪ್ರಚಾರ ಮಾಡಿದೆ  ಎಂದರು. ಈ ವೇಳೆ ಸರ್ಕಾರ ಹುನ್ನಾರ ಮಾಡಿದೆ ಎಂಬ ಪದ ತೆಗೆಯಿರಿ ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.

ಸ್ಪೀಕರ್ ನಡೆಗೆ ಶಾಸಕ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.  ಇದಕ್ಕೆಲ್ಲಾ  ಸರ್ಕಾರ  ನೇರ ಕಾರಣ ಹೈಕಮಾಂಡ್ ನಿರ್ದೇಶನದಂತೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ  ಎಂದು ಸುನೀಲ್ ಕುಮಾರ್ ಆರೋಪಿಸಿದರು. ಈ ಆರೋಪಕ್ಕೆ ಗರಂ ಆದ ಆಡಳಿತ ಪಕ್ಷದ ಸದಸ್ಯರು ನಿಮ್ಮ ಹೇಳಿಕೆ ವಾಪಸ್ ಪಡೆಯಿರಿ ಎಂದು ಆಗ್ರಹಿಸಿದರು.

ಈ ವೇಳೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್, ಧರ್ಮಸ್ಥಳಕ್ಕೆ ಕೆಟ್ಟಹೆಸರು ತರುವ ಉದ್ದೇಶ ನಮಗಿಲ್ಲ ಶವ ಹೂತಿರುವ ಬಗ್ಗೆ ಅನಾಮಿಕ ಹೇಳಿದ್ದಕ್ಕೆ ಎಸ್ ಐಟಿ ತನಿಖೆಗೆ ಆಗುತ್ತಿದೆ.  ಯಾರು ತಪ್ಪು ಮಾಡಿದ್ದಾರೆ ಎಂಬುದು ತನಿಖೆಯಿಂದ ಹೊರಬರಲಿ ತಪ್ಪು ಯಾರೇ ಮಾಡಿದ್ದರೂ ಕ್ರಮಕೈಗೊಳ್ಳುತ್ತೇವೆ ಎಂದರು.

Key words: MLA, Sunil Kumar, Government, spreading, slander,  Dharamsthala