ಮೈಸೂರು,ಆಗಸ್ಟ್,15,2025 (www.justkannada.in): ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲು ಬಿಡಲ್ಲ. ಅಪಚಾರ ಮಾಡುವವರ ವಿರುದ್ಧ ಸದಾ ನಾವು ನಿಲ್ಲುತ್ತೇವೆ ಎಂದು ಶಾಸಕ ಶ್ರೀವತ್ಸ ಹೇಳಿದರು.
ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಶ್ರೀವತ್ಸ, ಯಾರನ್ನ ಕೇಳಿ ಎಸ್ಐಟಿ ರಚೆನೆ ಮಾಡಿದ್ದಾರೆ.? ರಾಜ್ಯ ಸರ್ಕಾರದ ಸಹಾನುಭೂತಿಯಿಂದ ಇಷ್ಟೇಲ್ಲ ನಡೆಯುತ್ತಿದೆ. ಮಂಜುನಾಥ್ ಸ್ವಾಮಿ ಅಡಿಯಲ್ಲಿ ಹೆಣ ಇದೆ ಅಂತ ಅಂದ್ರೆ ತೆಗೆಸಿಬಿಡ್ತಾರಾ.? ಎಂದು ಕಿಡಿಕಾರಿದರು.
ಮೈಸೂರು ಮುಡಾ ಹಗರಣ, ಅಕ್ರಮ ರೆಸಾರ್ಟ್ ಹಗರಣ ಕೋಟ್ಯಾಂತರ ರೂಪಾಯಿ ಡ್ರಗ್ಸ್ ಕೇಸ್ ಆಯಿತು ಇದೆಲ್ಲವನ್ನ ಎಸ್ ಐಟಿಗೆ ವಹಿಸಿದ್ರಾ.? ಇದಕ್ಕೆ ಯಾಕೆ ಇಷ್ಟು ಮುತುವರ್ಜಿ ಧರ್ಮಸ್ಥಳ ಕ್ಷೇತ್ರಕ್ಕೆ ಅಪಚಾರ ಮಾಡುವವರ ವಿರುದ್ಧ ಸದಾ ನಾವು ನಿಲ್ಲುತ್ತೇವೆ ಎಂದರು.
ಸಚಿವ ಸ್ಥಾನದಿಂದ ಕೆ.ಎನ್ ರಾಜಣ್ಣ ವಜಾ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ಶ್ರೀವತ್ಸ, ಸತ್ಯ ಹೇಳಿದ್ದಕ್ಕೆ ವಜಾ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ.? ರಾಜಣ್ಣ ಅವರ ಅಧ್ಯಕ್ಷರು ಹೇಳಿದ್ದನ್ನ ಒಪ್ಪಲಿಲ್ಲ ಎನ್ನುವ ಕಾರಣಕ್ಕೆ ಸಂಪುಟದಿಂದ ಕಿತ್ತು ಹಾಕಿದ್ದಾರೆ. ಇದು ಒಬ್ಬ ಹಿಂದುಳಿದ ನಾಯಕನಿಗೆ ಮಾಡಿದ ಅಪಮಾನ ಕಾಂಗ್ರೆಸ್ ನಲ್ಲಿ ಸತ್ಯ ಹೇಳಿದ್ರೆ ಉಳಿಗಾಲ ಇಲ್ಲ ಎನ್ನುವುದು ತೋರಿಸುತ್ತದೆ ಎಂದರು.
ನಟ ದರ್ಶನ್ ಜಾಮೀನು ಅರ್ಜಿ ವಜಾ ವಿಚಾರ ಕುರಿತು ಪ್ರತಿಕ್ರಿಯಿಸಿದ ಶ್ರೀವತ್ಸ, ಇದು ಸತ್ಯಕ್ಕೆ ಸಂದ ಜಯ. ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನ ಯಾರಾದರೂ ಪ್ರಶ್ನೆ ಮಾಡೋಕೆ ಸಾಧ್ಯನಾ? ಸುಪ್ರೀಂ ಕೋರ್ಟ್ ಎಲ್ಲವನ್ನೂ ಅವಲೋಕಿಸಿ ತೀರ್ಪು ನೀಡಿದೆ. ಕಾನೂನಿನ ಮುಂದೆ ಎಲ್ಲರೂ ಒಂದೆ. ಈ ತೀರ್ಪುನ್ನ ನಾನು ಸ್ವಾಗತ ಮಾಡುತ್ತೇನೆ ಎಂದು ತಿಳಿಸಿದರು.
Key words: Dharmasthala, Case, Mysore, MLA, Srivatsa