ಗಾಡಿ ಚೌಕದ ದರ್ಗಾ ವಿವಾದ: ಪಾಲಿಕೆ ಆಯುಕ್ತರು ಕೂಡಲೇ ನೋಟಿಫಿಕೇಶನ್ ಹಿಂಪಡೆಯಲಿ- ಶಾಸಕ ಶ್ರೀವತ್ಸ ಆಗ್ರಹ

ಮೈಸೂರು,ಸೆಪ್ಟಂಬರ್,15,2025 (www.justkannda.in): ಗಾಡಿ ಚೌಕದಲ್ಲಿ ದರ್ಗಾ ‌ನಿರ್ಮಿಸುವ ಸಂಬಂಧ ಮೈಸೂರು ಮಹಾನಗರ ಪಾಲಿಕೆ ನೀಡಿರುವ ನೋಟಿಫಿಕೇಶನ್ ಕೂಡಲೇ ಹಿಂಪಡೆಯಬೇಕು ಇಲ್ಲದಿದ್ದರೇ ಜಾಗ ಉಳಿಸಲು ನಾವು ಹೋರಾಟ ಮಾಡುತ್ತೇವೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದರು.

ಕೆ.ಆರ್ ಮೊಹಲ್ಲಾದ ಗಾಡಿ ಚೌಕದಲ್ಲಿ ಉದ್ಯಾನವನ, ತೆರದ ಪ್ರದೇಶದ ಜಾಗದಲ್ಲಿ ದರ್ಗಾ ನಿರ್ಮಿಸಲು ಪತ್ರಿಕೆಗಳಲ್ಲಿ ನೋಟಿಸ್ ನೀಡಿ ಪ್ರಕಟಣೆ ಹೊರಡಿಸಿರುವ ಜಾಗದ ಸ್ಥಳ ಪರಿಶೀಲನೆ ನಡೆಸಿ ಬಳಿಕ ಶಾಸಕ ಶ್ರೀವತ್ಸ ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು.

ಯಾವುದಾರರು ಸರ್ಕಾರಿ ಜಾಗದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುಮತಿ ಕಡ್ಡಾಯ. ಆದರೆ ಅಕ್ರಮವಾಗಿ ದರ್ಗಾ ಕಟ್ಟಲು ಮುಂದಾಗಿದ್ದಾರೆ . ಇದಕ್ಕೆ ಪಾಲಿಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಅವರು ಖಾತೆ ಮಾಡಿಕೊಡಲು ಅರ್ಜಿ ಹಾಕಿದ್ರೆ, ನೋಟಿಫಿಕೇಶನ್  ಹೋರಡಿಸಿದ್ದಾರೆ. 15 ದಿನಗಳಲ್ಲಿ ಆಕ್ಷೇಪಣೆ ಇದ್ದರೆ ಸಲ್ಲಿಸಿ ಅಂತ ಪ್ರಕಟಣೆ ಹೊರಡಿಸಿದ್ದಾರೆ. ನೋಟಿಫಿಕೇಶನ್ ಆದ ಮೇಲೆ  ಆ ಜಾಗದಲ್ಲಿ ನಾಮಫಲಕ ಹಾಕಬೇಕು. ಆದರೆ ನಾಮಫಲಕ ಹಾಕಿಲ್ಲ. ನೋಟಿಫಿಕೇಶನ್ ಜಾಹೀರಾತು ಕೊಟ್ಟಿದ್ದಾರೆ ಅದು ನಾಯಿಮರಿ ಕಳೆದಿದೆ ಅಂತ ಕೊಡುವ ಜಾಗದಲ್ಲಿ ಚಿಕ್ಕದಾಗಿ ನೋಟಿಫಿಕೇಶನ್ ಕೊಟ್ಟಿದ್ದಾರೆ ಎಂದು ಶಾಸಕ ಶ್ರೀವತ್ಸ ಲೇವಡಿ ಮಾಡಿದರು.

ಆ ಜಾಗ ಸುಮಾರು 45 ಸಾವಿರ ಚದರಡಿ ಇದೆ. ಗೆಜೆಟ್ ಇಯರ್ 1965 ರ ಉಲ್ಲೇಖ ಇದೆ. ಇದು ವಕ್ಫ್ ಆಸ್ತಿ ಅಂತಾರೆ. ಗೆಜೆಟ್ ಇಯರ್ ನಲ್ಲಿ ಮಿಸ್ಟೇಕ್ ಇದೆ . ಆ ಜಾಗವೇ ಬೇರೆ ಈ ಜಾಗವೇ ಬೇರೆ. ಗೆಜೆಟ್ ನಲ್ಲಿ ವಿಸ್ತೀರ್ಣ ಹಾಕಿಲ್ಲ. ಈ ಜಾಗಕ್ಕೆ 2025 ರಲ್ಲಿ ಖಾತೆ ಮಾಡಲು ಮುಂದಾಗಿದ್ದಾರೆ. ಇಷ್ಟೊಂದು ಧೀರ್ಘ ಕಾಲ ಖಾತೆ ಆಗಿಲ್ಲ,  ಕಂದಾಯ ಕಟ್ಟಿಲ್ಲ. ಈಗ ಆ ಜಾಗದಲ್ಲಿ ಪಿಲ್ಲರ್ ಹಾಕುತ್ತಿದ್ದಾರೆ. ಅದನ್ನು ಅಧಿಕಾರಿಗಳಿಗೆ ಹೇಳಿ ನಾನೇ ಕೆಲಸ ನಿಲ್ಲಿಸಲು ಹೇಳಿದ್ದೆ. ಅನಧಿಕೃತ ಕಟ್ಟಡವನ್ನು ಯಾವುದೇ ಅನುಮತಿ ಇಲ್ಲದೆ ಕಟ್ಟಿದ್ದಾರೆ. ಅದನ್ನು ಕೆಡುವುವಂತಹ ಕೆಲಸಕ್ಕೆ ನಗರಪಾಲಿಕೆ ಕೈ ಹಾಕಿಲ್ಲ. ನಾನು ಈ ಬಗ್ಗೆ 15.4.2025 ರಲ್ಲಿ ಪತ್ರ ಬರೆದು ದೂರು ನೀಡಿದ್ದೆ. ಅದಕ್ಕೆ ಲೆಟರ್ ಪುಟಪ್ ಮಾಡಿದ್ದಾರೆ. ನಾನು ಪತ್ರ ಬರೆದ ನಂತರ ಮುಸ್ಲಿಂ ಟ್ರಸ್ಟ್ ಗೆ ಖಾತೆ ಮಾಡಲು ಪಾಲಿಕೆ ಮುಂದಾಗಿದೆ. ಅದು ದಸರಾ ಸಮಯದಲ್ಲಿ ಈ ರೀತಿ ಕೆಲಸಕ್ಕೆ ಮುಂದಾಗಿದೆ. 1ಎಕರೆಗೂ ಹೆಚ್ಚು ಜಾಗವನ್ನು ಅವರಿಗೆ ಖಾತೆ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಗೆಜೆಟ್ ಇಯರ್ ನಲ್ಲಿ ಅನುಮೋದನೆ ಸಿಕ್ಕಿದೆ ಅಂತಾರೆ. ಆದರೆ ವಕ್ಫ್ ಆಸ್ತಿ ಆಗಿದ್ದರೆ ಸರ್ಕಾರ ಕೊಟ್ಟಿರಬೇಕು. ಇಲ್ಲದಿದ್ದರೆ ಯಾರಾದರೂ ದಾನ ಮಾಡಿರಬೇಕು ಎಂದು ತಿಳಿಸಿದರು.

ಒಬ್ಬರು ಹೆಣ್ಣು ಮಗಳು ಇದೇ ಜಾಗದ ವಿರುದ್ಧ ಕಾನೂನು ಹೋರಾಟ ಮಾಡಿದ್ದಾರೆ. ಆ ಜಾಗ ನನಗೆ ಸೇರಿದ್ದು ಎಂದು ನ್ಯಾಯಾಲಯದಲ್ಲಿ ಕೇಸ್ ಹಾಕಿದರು. ತಾಹಿರ ಬೇಗಂ ಟೈಟಲ್ ಸೂಟ್ ಹಾಕಿದ್ದಾರೆ. ಅದು ಇನ್ನೂ ಕ್ಲಿಯರ್ ಆಗಿಲ್ಲ . ಇಂತಹ ಜಾಗವನ್ನು  ನಗರ ಪಾಲಿಕೆ ಕಮಿಷನರ್  ಮುಸ್ಲಿಂ ಟ್ರಸ್ಟ್ ಗೆ ಖಾತೆ ಮಾಡಿಕೊಡಲು ಮುಂದಾಗಿದ್ದಾರೆ. ಕೋಮು ಸೌಹಾರ್ದತೆ ಕಾಪಾಡಬೇಕಿದ್ದ ಪಾಲಿಕೆಯೇ ಕೋಮು ಸೌಹಾರ್ದ ಹಾಳಾಗುವಂತೆ ಮಾಡುತ್ತಿದೆ. ಈ ಕೂಡಲೇ ಈ ನೋಟಿಫಿಕೇಶನ್ ಹಿಂಪಡೆಯಬೇಕು. ಈ ಕೂಡಲೇ ಇದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಜಾಗ ಉಳಿಸಲು ನಾವು ಹೋರಾಟ ಮಾಡುತ್ತೇವೆ ಶಾಸಕ ಶ್ರೀವತ್ಸ ಎಚ್ಚರಿಕೆ ನೀಡಿದರು.

Key words: Dargah, Construction, Mysore, withdrawn,  notification- MLA Shrivatsa