ಶಾಸಕ ಸಾರಾ ಮಹೇಶ್ ಗಾರ್ಮೆಂಟ್ಸ್ ಕಟ್ಟಡ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ….

ಮೈಸೂರು,ಮೇ,12,2021(www.justkannada.in): ಕೊರೋನಾ ಸಂಕಷ್ಟದಲ್ಲಿ ಕೆ.ಆರ್ ನಗರ ಕ್ಷೇತ್ರದ ಜನತೆಗೆ ಸಹಕರಿಸಲು ಮುಂದಾಗಿರುವ ಶಾಸಕ ಸಾ.ರಾ ಮಹೇಶ್ ಇದೀಗ ಗಾರ್ಮೆಂಟ್ಸ್ ಅನ್ನ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಿದ್ದಾರೆ. jk

ಕೆ. ಆರ್. ನಗರ ತಾಲ್ಲೂಕು ಕಗ್ಗೆರೆ ಗ್ರಾಮದಲ್ಲಿರುವ ಶಾಸಕ ಸಾ.ರಾ ಮಹೇಶ್ ಗಾರ್ಮೆಂಟ್ಸ್ ಕಟ್ಟಡವನ್ನ ತಾತ್ಕಾಲಿಕವಾಗಿ 200 ಹಾಸಿಗೆಯುಳ್ಳ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತನೆ ಮಾಡಲಾಗಿದೆ. ಶಾಸಕ ಸಾ.ರಾ ಮಹೇಶ್ ಕೋವಿಡ್ ಕೇರ್ ಸೆಂಟರ್ ಅನ್ನು ಉದ್ಘಾಟನೆ ಮಾಡಿ ಲೋಕಾರ್ಪಣೆಗೊಳಿಸಿದರು.mla-sara-mahesh-garments-conversion-building-covid-care-centre

ಕೋವಿಡ್ ಕೇರ್ ಸೆಂಟರ್ ಗೆ 7 ಜನ ವೈದ್ಯರನ್ನ ನೇಮಕ ಮಾಡಿಲಾಗಿದ್ದು, ಕೋವಿಡ್ ಕೇರ್ ಸೆಂಟರ್ ಸೇವೆಯನ್ನು ಬಳಸಿಕೊಳ್ಳುವಂತೆ ಕ್ಷೇತ್ರದ ಜನತೆಗೆ  ಸಾ.ರಾ ಮಹೇಶ್ ಮನವಿ ಮಾಡಿದ್ದಾರೆ.

Key words: MLA-Sara Mahesh- Garments -Conversion – Building – Covid Care centre