ಬೆಂಗಳೂರು,ಮಾರ್ಚ್,17,2026 (www.justkannada.in): ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ಇದರಿಂದ ಜನರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ ಟೋಯಿಂಗ್ ಆರಂಭಿಸಬೇಕು ಎಂದು ಬಿಜೆಪಿ ಶಾಸಕ ಎಸ್.ಆರ್ ವಿಶ್ವನಾಥ್ ಆಗ್ರಹಿಸಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಎಸ್.ಆರ್ ವಿಶ್ವನಾಥ್, ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ಹೋಗುತ್ತಾರೆ. ಹೀಗಾಗಿ ಟೋಯಿಂಗ್ ಮಾಡಿ ಅಥವಾ ಸ್ಥಳದಲ್ಲೇ ದಂಡ ವಿಧೀಸಬೇಕು. ಈ ಹಿಂದೆ ಟೋಯಿಂಗ್ ವ್ಯವಸ್ಥೆ ಇತ್ತು ಅದನ್ನು ನಿಲ್ಲಿಸಿದ್ದಾರೆ.
ಡಾ ಸಲೀಂ ಸಂಚಾರಿ ಆಯುಕ್ತರಾಗಿದ್ದಾಗ ಟೋಯಿಂಗ ಇತ್ತು ಈಗ ಅವರೇ ಡಿಜಿ&ಐಜಿಪಿಯಾಗಿದ್ದಾರೆ. ಹೀಗಾಗಿ ಟೋಯಿಂಗ್ ಜಾರಿ ಮಾಡಲಿ. ಬೆಂಗಳೂರಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳು ಹೆಚ್ಚುತ್ತಿವೆ ಸ್ಥಳದಲ್ಲಿ ದಂಡ ವಿಧಿಸಲು ಪೊಲೀಸರಿಗೆ ಅನುಮತಿ ನೀಡಬೇಕು ಎಂದು ಶಾಸಕ ಎಸ್ ಆರ್ ವಿಶ್ವನಾಥ್ ಒತ್ತಾಯಿಸಿದರು.
Key words: MLA, S.R. Vishwanath, start, towing, Bengaluru







