ಬಿವೈ ವಿಜಯೇಂದ್ರಗೆ ಬೆಂಗಳೂರಿನ ಮೇಲೆ ಹಿಡಿತ ಇಲ್ಲ-ಶಾಸಕ ಎಸ್ .ಆರ್ ವಿಶ್ವನಾಥ್ ಕಿಡಿ

ಬೆಂಗಳೂರು,ನವೆಂಬರ್,4,2025 (www.justkannada.in): ಜಿಬಿಎ( ಗ್ರೇಟರ್ ಬೆಂಗಳೂರು ಅಥಾರಿಟಿ)ಗೆ ಬಿಜೆಪಿ ಉಸ್ತುವಾರಿ ಸಮಿತಿ ರಚನೆ ಮಾಡಿದ್ದು ಸಮಿತಿಗೆ ತನ್ನ ಹೆಸರನ್ನ ಪರಿಗಣಿಸದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ದ ಯಲಹಂಕ ಶಾಸಕ ಎಸ್.ಆರ್ ವಿಶ್ವನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಶಾಸಕ ಎಸ್.ಆರ್ ವಿಶ್ವನಾಥ್,  ಕಾಡಿನಲ್ಲೂ ಬಿಟ್ಟರೂ ಸಂಘಟನೆ ಮಾಡುವ ಶಕ್ತಿ ನನಗಿದೆ. ವಿಜಯೇಂದ್ರಗೆ ಬೆಂಗಳೂರಿನ  ಮೇಲೆ ಹಿಡಿತ ಇಲ್ಲ.  ಬೆಂಗಳೂರು ಗೆದ್ದರೇ ಇಡೀ ರಾಜ್ಯ ಗೆದ್ದಂತೆ ಎಂದಿದ್ದೇನೆ. ಜಿಬಿಎ ಉಸ್ತುವಾರಿ  ಸಮಿತಿ ರಚನೆಯಲ್ಲಿ ತನ್ನ ಹೆಸರು ಪರಿಗಣಿಸಿಲ್ಲ  ನನ್ನನ್ನ ಯಲಹಂಕಕ್ಕೆ ಸೀಮಿತ ಮಾಡಿದ್ದಾರೆ.  47 ವರ್ಷದಿಂದ ಪಕ್ಷ ಸಂಘಟನೆ ಮಾಡಿದ್ದೇನೆ. ನಂದೀಶ್ ರೆಡ್ಡಿ ಪಟ್ಟಿ ಮಾಡಿದ್ದಾರಂತೆ ಅದಕ್ಕೆ ಬಿವೈ ವಿಜಯೇಂದ್ರ ಸಹಿ ಮಾಡಿದ್ದಾರಂತೆ ಎಂದು ಹರಿಹಾಯ್ದರು.

ಪಕ್ಷದಲ್ಲಿ ಸೋತವರಿಗೆ ಹುದ್ದೆಯನ್ನ ಕೊಟ್ಟು ಹಿರಿಯರಿಗೆ ಮುಜುಗರವನ್ನುಂಟು ಮಾಡಿದ್ದೀರಿ. ಚುನಾವಣೆ ಸೋತರೇ ಉಸ್ತುವಾರಿಗಳನ್ನೇ  ಹೊಣೆ ಮಾಡಿ ನಮ್ಮ ತಲೆಗೆ ಕಟ್ಟಬೇಡಿ. ನಾನು ನನ್ನ ಕ್ಷೇತ್ರ ನೋಡಿಕೊಂಡು ಇರುತ್ತೇನೆ ಎಂದು ಎಸ್ ಆರ್ ವಿಶ್ವನಾಥ್ ಕಿಡಿ ಕಾರಿದ್ದಾರೆ.

Key words: BY Vijayendra,  no control, Bengaluru, MLA, S.R. Vishwanath