ದಾವಣಗೆರೆ,ನವೆಂಬರ್,3,2022(www.justkannada.in): ಅಕ್ಟೋಬರ್ 30 ರಂದು ಕಾರು ಸಮೇತ ನಾಪತ್ತೆಯಾಗಿದ್ದ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಇದೀಗ ಶವವಾಗಿ ಪತ್ತೆಯಾಗಿದ್ದಾರೆ.![]()
ದಾವಣಗೆರೆ ಜಿಲ್ಲೆ ಹೊನ್ನಾಳಿ ತಾಲ್ಲೂಕು ಕಡದಕಟ್ಟೆ ಬಳಿ ಕಾಲುವೆಯಲ್ಲಿ ಚಂದ್ರಶೇಖರ್ ಅವರ ಕಾರು ಪತ್ತೆಯಾಗಿದ್ದು ಕ್ರೇನ್ ಮೂಲಕ ಕಾರನ್ನ ಮೇಲೆಕ್ಕೆ ಎತ್ತಲಾಗಿತ್ತು. ಇದೀಗ ಕಾರಿನಲ್ಲಿ ಚಂದ್ರಶೇಖರ್ ಶವ ಪತ್ತೆಯಾಗಿದೆ.
KA 17 MA 2534 ನಂಬರ್ ನ ಕಾರು ಕಾಲುವೆಯಲ್ಲಿ ಪತ್ತೆಯಾಗಿದ್ದು ಕಾರು ಚಂದ್ರಶೇಖರ್ ಅವರದ್ದಾಗಿದೆ. ಶಿವಮೊಗ್ಗಕ್ಕೆ ತೆರಳಿದ್ದ ಚಂದ್ರಶೇಖರ್ ವಾಪಸ್ ದಾವಣಗೆರೆಗೆ ಬರುವಾಗ ನಾಪತ್ತೆಯಾಗಿದ್ದರು. ಚಂದ್ರಶೇಖರ್ ಗಾಗಿ ಸಾಕಷ್ಟು ಹುಡುಕಾಟ ನಡೆಸಲಾಗಿತ್ತು.
Key words: MLA Renukacharya- brother- Son-found- dead.







