ಬೆಂಗಳೂರು,ಏಪ್ರಿಲ್,27,2026 (www.justkannada.in): ಮೇ15 ರಂದು ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಅಂದು ಡಿಕೆ ಶಿವಕುಮಾರ್ ಅವರಿಗೆ ಹೈಕಮಾಂಡ್ ಶಕ್ತಿ ಕೊಡುವ ಭರವಸೆ ಇದೆ ಎಂದು ಕುಣಿಗಲ್ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ರಂಗನಾಥ್, ದೆಹಲಿ ವರಿಷ್ಠರು ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ಇದೆ. ನಮ್ಮ ಕೆಲಸ ನಾವು ಮಾಡುತ್ತೇವೆ ಫಲಾಫಲ ಭಗವಂತನಿಗೆ ಬಿಟ್ಟಿದ್ದು ಎಂದರು.
ಡಿಕೆ ಶಿವಕುಮಾರ್ ಅನೇಕ ಅಭಿವೃದ್ದಿ ಕೆಲಸ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರ ಶ್ರಮಕ್ಕೆ ಹೈಕಮಾಂಡ್ ಪ್ರತಿಫಲ ನೀಡಬೇಕು. ಮೇ 15ಕ್ಕೆ ಡಿಕೆಶಿವಕುಮಾರ್ ಗೆ ಹೈಕಮಾಂಡ್ ಶಕ್ತಿ ಕೊಡುವ ಭರವಸೆ ಇದೆ ಎಂದು ಶಾಸಕ ರಂಗನಾಥ್ ತಿಳಿಸಿದರು.
Key words: MLA, Ranganath, high command, power, DCM, DK Shivakumar







