ನಾನು ಒಬ್ಬನೇ ಅಲ್ಲ: 17 ಜನರೂ ಹೀರೋಗಳೇ: ಸೋತವರಿಗೂ ಮಂತ್ರಿ ಸ್ಥಾನ ನೀಡುವಂತೆ ಶಾಸಕ ರಮೇಶ್ ಜಾರಕಿಹೊಳಿ ಆಗ್ರಹ…

ಬೆಂಗಳೂರು,ಜ,31,2020(www.justkannada.in):  ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚಿಸಲು ಸಿಎಂ ಬಿಎಸ್ ಯಡಿಯೂರಪ್ಪ ದೆಹಲಿಗೆ ತೆರಳಿದ್ದು ಅಮಿತ್ ಶಾ ಅವರನ್ನ ಭೇಟಿಯಾಗಿ ಚರ್ಚಿಸಲಿದ್ದಾರೆ. ಈ ನಡುವೆ ಉಪಚುನಾವಣೆಯಲ್ಲಿ ಸೋತವರಿಗೂ ಸಚಿವ ಸ್ಥಾನ ನೀಡುವಂತೆ ಶಾಸಕ ರಮೇಶ್ ಜಾರಕಿಹೊಳಿ ಆಗ್ರಹಿಸಿದ್ದಾರೆ.

ಇಂದು ಈ ಬಗ್ಗೆ ಮಾತನಾಡಿರುವ ಶಾಸಕ ರಮೇಶ್ ಜಾರಕಿಹೊಳಿ,ನಾನೊಬ್ಬ ಅಲ್ಲ ರಾಜೀನಾಮೆ ಕೊಟ್ಟು ಬಂದ 17 ಮಂದಿಯೂ ಹೀರೋಗಳೇ. ಸೋತವರಿಗೂ ಸಹ ಸಚಿವ ಸ್ಥಾನ ನೀಡಲಿ. ಸಿಎಂ ಬಿಎಸ್ ಯಡಿಯೂರಪ್ಪಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದು ತಿಳಿಸಿದರು.

ಸರ್ಕಾರಕ್ಕಾಗಿ  17 ಜನರು ತ್ಯಾಗ ಮಾಡಿದ್ದೇವೆ. ಹೀಗಾಗಿ ಉಪಚುನಾವಣೆಯಲ್ಲಿ ಗೆದ್ದ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು.  ಸೋತವರಿಗೆ ಸಚಿವಸೋತವರಿಗೂ ಮಂತ್ರಿ ಸ್ಥಾನ ನೀಡಲಿ. ಸಚಿವ ಸಂಪುಟ ವಿಸ್ತರಣೆ ಗಡಿಬಿಡಿ ಇಲ್ಲ. ಸಂಪುಟ ವಿಸ್ತರಣೆಗೆ ಯಾವುದೇ ಡೆಡ್ ಲೈನ್ ಕೊಟ್ಟಿಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.

ಸಂಪುಟ ವಿಸ್ತರಣೆ ವೇಳೆ ಕೆಲವು ಸಚಿವರನ್ನ ಕೈ ಬಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕರ ರಮೇಶ್ ಜಾರಕಿಹೊಳಿ, ಕೆಲವರನ್ನ ಸಂಪುಟದಿಂದ ಕೈ ಬಿಡುವ ವಿಚಾರದ ಬಗ್ಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

Key words: MLA-Ramesh Jarkiholi- demands –loser-ministerial position