ಶಾಸಕ ಎಸ್.ಎ.ರಾಮದಾಸ್-ಪ್ರೇಮಾ ಪ್ರಕರಣಕ್ಕೆ ಮರುಜೀವ ! 420, 506 ಸೆಕ್ಷನ್’ನಡಿ ಪ್ರಕರಣ ದಾಖಲಿಸಲು ಕೋರ್ಟ್ ಸೂಚನೆ

ಬೆಂಗಳೂರು, ಜೂನ್ 02, 2019 (www.justkannada.in): ಶಾಸಕ ಎಸ್.ಎ.ರಾಮದಾಸ್-ಪ್ರೇಮ ಪ್ರಕರಣ ಮತ್ತೆ ಮರು ಜೀವ ಬಂದಿದೆ.

ಶಾಸಕ ಎಸ್.ಎ. ರಾಮದಾಸ್ ಗೆ ಮತ್ತೆ ಕಾನೂನು ಸಂಕಷ್ಟ ಎದುರಾಗಿದೆ. ಸಿಐಡಿ ತನಿಖೆ ನಡೆಸಿ ಸಲ್ಲಿಸಿದ್ದ ಬಿ ರಿಪೋರ್ಟ್ ತಿರಸ್ಕರಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ. 2014ರಲ್ಲಿ ನಡೆದಿದ್ದ ಪ್ರಕರಣಕ್ಕೆ ಇದೀಗ ಮರು ಜೀವ ಬಂದಿದೆ.

ಪ್ರೇಮಕುಮಾರಿಗೆ ರಾಮದಾಸ್ ಮೋಸ ಮಾಡಿಲ್ಲವೆಂದು ಅಭಿಪ್ರಾಯಿಸಿ ಸಿಐಡಿ ಪ್ರಕರಣಕ್ಕೆ ಬಿ ರಿಪೋರ್ಟ್ ಹಾಕಿತ್ತು. ಸಿಐಡಿ ಕ್ರಮವನ್ನು ಪ್ರಶ್ನೆ ಮಾಡಿ ಪ್ರೇಮಕುಮಾರಿ ಅರ್ಜಿ ಸಲ್ಲಿಸಿದ್ದರು. ಪ್ರೇಮಕುಮಾರಿ ಪರ ವಕೀಲ ಅಮೃತೇಶ್ ವಾದಿಸಿದ್ದರು.

ರಾಮದಾಸ್ ವಿರುದ್ಧ ಪ್ರಕರಣ ದಾಖಲಿಸಲು ಕೋರ್ಟ್ ಆದೇಶ ನೀಡಿದೆ. 420, 506 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ  ಕೋರ್ಟ್ ಆದೇಶ ನೀಡಿದೆ.