ಬೆಂಗಳೂರು,ಜುಲೈ,1,2025 (www.justkannada.in): ಸಚಿವ ಸ್ಥಾನ ಕೊಡುತ್ತೀವಿ ಅಂದರೂ ನನಗೆ ಬೇಡ. ನಾನು ಜನರ ಸಲುವಾಗಿ ಹೋರಾಟ ಮಾಡುತ್ತೇನೆ. ನನ್ನ ಅಸಮಾಧಾನದ ಬಗ್ಗೆ ರಣದೀಪ್ ಸುರ್ಜೇವಾಲ ಅವರ ಬಳಿ ಹೇಳುತ್ತೇನೆ ಎಂದು ಕಾಂಗ್ರೆಸ್ ಶಾಸಕ ರಾಜುಕಾಗೆ ತಿಳಿಸಿದರು.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ರಾಜುಕಾಗೆ, ನಿನ್ನೆ ಕಾರ್ಯಕ್ರಮ ಇದ್ದ ಕಾರಣ ರಣದೀಪ್ ಸುರ್ಜೇವಾಲ ಅವರನ್ನ ಭೇಟಿಯಾಗಿರಲಿಲ್ಲ ಇಂದು ಬೆಳಿಗ್ಗೆ 11 ಗಂಟೆಗೆ ಭೇಟಿಯಾಗುತ್ತೇನೆ. ನೋವು ಆಗಿದೆ ಎಂದು ಆತ್ಮಹತ್ಯೆ ಮಾಡಿಕೊಳ್ಳಲು ಆಗುವುದಿಲ್ಲ. ಅವರು ಸಚಿವ ಸ್ಥಾನ ಕೊಡುತ್ತೇನೆ ಅಂದ್ರೆ ನನಗೆ ಬೇಡ ನನಗೆ ಯಾವುದೇ ಆಸೆ ಇಲ್ಲ. ಈ ಒತ್ತಡಗಳಿ ಹೆದರುವುದಿಲ್ಲ ಸುರ್ಜೇವಾಲ ಏನೇನು ಕೇಳುತ್ತಾರೋ ಅದಕ್ಕೆಲ್ಲಾ ಉತ್ತರ ಕೊಡುತ್ತೇನೆ ನಮ್ಮ ಅಸಮಾಧಾನ ಬಗ್ಗೆ ಸುರ್ಜೇವಾಲರ ಗಮನಕ್ಕೆ ತರುತ್ತೇನೆ ಎಂದರು.
ನನಗೆ ಮಂತ್ರಿ ಆಗುವ ಆಸೆ ಇಲ್ಲ ಜನರ ಸಲುವಾಗಿ ನನ್ನ ಹೋರಾಟ. ಪತ್ರ ಕೊಟ್ಟರೇ ಸಚಿವರು ನೋಡಲ್ಲ. ಬಿ.ಆರ್ ಪಾಟೀಲ್ ಹೇಳಿದ್ದು ನಿಜ. ನನಗೂ ನೋವಾಗಿದೆ ಎಂದು ಶಾಸಕ ರಾಜುಕಾಗೆ ತಿಳಿಸಿದರು.
Key words: Meet, Ranadeep Singh Surjevala- MLA, Rajukage