ಬಿಜೆಪಿ ಕುಮ್ಮಕ್ಕಿನಿಂದಲೇ ಗಲಾಟೆ: ನಮ್ಮ ಕಾರ್ಯಕರ್ತನ ಸಾವಿಗೆ ಅವರೇ ಕಾರಣ- ಶಾಸಕ ಪ್ರದೀಪ್ ಈಶ್ವರ್

ಬೆಂಗಳೂರು,ಜನವರಿ,5,2026 (www.justkannada.in):  ಬಿಜೆಪಿ ಕುಮ್ಮಕ್ಕಿನಿಂದಲೇ ಬಳ್ಳಾರಿಯಲ್ಲಿ ಗಲಾಟೆಯಾಗಿದೆ. ನಮ್ಮ ಪಕ್ಷ ಕಾರ್ಯಕರ್ತನ ಸಾವಿಗೆ ಬಿಜೆಪಿಯವರೇ ಕಾರಣ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಆರೋಪಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿಗರಿಗೆ ಮಾನ ಮರ್ಯಾದೆ ಇದ್ದರೆ ಬಾಯಿ ಮುಚ್ಚುಕೊಂಡು ಇರಿ.  ಏನಾಗಿದೆ ಎಂದು ಪೊಲೀಸ್ ತನಿಖೆಯಲ್ಲಿ ಗೊತ್ತಾಗುತ್ತೆ. ಮಾಜಿ ಸಚಿವ ಶ್ರೀರಾಮುಲು ಬಂದು ಬ್ಯಾನರ್ ಹರಿದು ಹಾಕಿದ್ದಾರೆ. ನಮ್ಮ ಪಕ್ಷದ ರಾಜಶೇಖರ ಸಾವಿಗೀಡಾಗಲು ಬಿಜೆಪಿಯೇ ಕಾರಣ  ಕಾಂಗ್ರೆಸ್ ಪಕ್ಷದಲ್ಲಿರುವ ಯುವಕರನ್ನ ಕೆಣಕಬೇಡಿ ವಿನಾಕಾರಣ ಕಾರ್ಯಕರ್ತರನ್ನ ಟಾರ್ಗೆಟ್ ಮಾಡಿದ್ರೆ ಸರಿ ಇರಲ್ಲ ಎಂದು ಎಚ್ಚರಿಸಿದರು.

ಪೊಲೀಸ್ ತನಿಖೆ ನಡೆಯುತ್ತಿದೆ ಕೆಲವರನ್ನ ಅರೆಸ್ಟ್ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಬಳ್ಳಾರಿ ರಿಪಬ್ಲಿಕ್ ಮಾಡಲು ಬಿಡಲ್ಲ. ಶಾಸಕ ನಾರಾ ಭರತ್ ರೆಡ್ಡಿಯದ್ದು ತಪ್ಪೇನಿಲ್ಲ ಇದು ನನ್ನ ನಿಲುವು ಎಂದು ಪ್ರದೀಪ್ ಈಶ್ವರ್ ತಿಳಿಸಿದರು.

Key words: BJP, ballari, roit,  MLA, Pradeep Eshwar