ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಈ ಕೃತ್ಯ: ವಿರೋಧಿಗಳ ಕುತಂತ್ರಕ್ಕೆ ಚಂದ್ರು ಬಲಿಯಾಗಿದ್ದಾನೆ- ಶಾಸಕ ಎಂ.ಪಿ ರೇಣುಕಾಚಾರ್ಯ. ಕಣ್ಣೀರು.

ದಾವಣಗೆರೆ,ನವೆಂಬರ್,4,2022(www.justkannada.in): ತನ್ನ ಸಹೋದರ ಪುತ್ರ ಚಂದ್ರ ಶೇಖರ್ ಸಾವನ್ನಪ್ಪಿರುವ ವಿಚಾರ ಕುರಿತಂತೆ ಪ್ರತಿಕ್ರಿಯಿಸಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಈ ಕೃತ್ಯ ಮಾಡಲಾಗಿದೆ. ವಿರೋಧಿಗಳ ಕುತಂತ್ರಕ್ಕೆ ಚಂದ್ರು ಬಲಿಯಾಗಿದ್ದಾನೆ ಎಂದು ಕಣ್ಣೀರಿಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಎಂ.ಪಿ ರೇಣುಕಾಚಾರ್ಯ, ನನ್ನ ಮಗ ಹಿಂದುತ್ವಕ್ಕಾಗಿ ಹೋರಾಟ ಮಾಡುತ್ತಿದ್ದ. ನಾವು ಈಗಾಗಲೇ ಮಿಸ್ಸಿಂಗ್ ಪ್ರಕರಣ ದಾಖಲಿಸಿದ್ದವು.  ಇದೀಗ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಿದ್ದೇವೆ. ಸಿಎಂ ಪಾರದರ್ಶಕ ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದಾರೆ.

ಸಾವರ್ಕರ್ ಫ್ಲೆಕ್ಸ್  ವಿಚಾರವಾಗಿ ಚಂದ್ರು ಸಾಕಷ್ಟು  ಹೋರಾಟ ಮಾಡಿದ್ದ.  ಸಾವರ್ಕರ್ ಫ್ಲೆಕ್ಸ್ ಘಟನೆಯಾದಾಗಲೇ ಎಚ್ಚೆತ್ತುಕೊಳ್ಳಬೇಕಿತ್ತು. ಆದ್ರೆ ವಿರೋಧೀಗಳ ಕುತಂತ್ರಕ್ಕೆ ಚಂದ್ರು ಬಲಿಯಾಗಿದ್ದಾನೆ. ನನ್ನ ರಾಜಕೀಯ ಪ್ರಭಾವ ಕುಗ್ಗಿಸಲು ಈ ರೀತಿ ಮಾಡಿದ್ದಾರೆ ಎಂದು ಎಂಪಿ ರೇಣುಖಾಚಾರ್ಯ ತಿಳಿಸಿದ್ದಾರೆ.

Key words: MLA MP Renukacharya-brother-son- death- tears