ತನ್ನ ಪಕ್ಷದ ಶಾಸಕನ ವಿರುದ್ಧವೇ ಗುಡುಗಿದ ಶಾಸಕ ಎಂ.ಪಿ ರೇಣುಕಾಚಾರ್ಯ….

ದಾವಣಗೆರೆ,ಜನವರಿ,1,2021(www.justkannada.in):  ಸಿಎಂ ಬಿಎಸ್ ಯಡಿಯೂರಪ್ಪ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪದೇ ಪದೇ ಬಹಿರಂಗ ಹೇಳಿಕೆ ನೀಡುತ್ತಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇದೀಗ ಶಾಸಕ ಎಂ.ಪಿ ರೇಣುಕಾಚಾರ್ಯ ಗುಡುಗಿದ್ದಾರೆ.jk-logo-justkannada-mysore

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ತಾವೇ ಸಿಎಂ ಎಂಬುದಾಗಿ ತಿಳಿದಿರಬಹುದು. ಆದರೆ ರಾಜ್ಯದಲ್ಲಿ ಸಿಎಂ ಖುರ್ಚಿ ಖಾಲಿ ಇಲ್ಲ. ಅದಕ್ಕೆ ಟವಲ್ ಹಾಕಲು ಬರಲ್ಲ ಎಂದು ಶಾಸಕ ಎಂ.ಪಿ ರೇಣುಕಾಚಾರ್ಯ ಕಿಡಿಕಾರಿದ್ದಾರೆ.mla-mp-renekacharya-against-mla-basanagowda-yatnal

ದಾವಣಗೆರೆಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಶಾಸಕ ಎಂ.ಪಿ ರೇಣುಕಾಚಾರ್ಯ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಪಕ್ಷದ ವರಿಷ್ಠರು ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ಹಾದಿ ಬೀದಿಯಲ್ಲಿ ಹೇಳಿಕೆ ನೀಡುವುದಕ್ಕೆ ಬ್ರೇಕ್ ಹಾಕಬೇಕು. ನಮ್ಮ ಹೇಳಿಕೆಗಳು ವಿಪಕ್ಷಗಳಿಗೆ ಆಹಾರವಾಗಬಾರದು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅಲ್ಲದೆ ಮೂರುವರೆ ವರ್ಷ ಬಿಎಸ್ ವೈ ಅವರೇ ಸಿಎಂ ಎಂದು ಹೇಳಬೇಕು. ವರಿಷ್ಠರೇ ಸ್ಪಷ್ಟಪಡಿಸಬೇಕು ಎಂದರು.

Key words: MLA- MP Renekacharya-against – MLA- Basanagowda yatnal