ಜನರ ಸಮಸ್ಯೆ ಆಲಿಸಿದ ಶಾಸಕ ಎಲ್ ನಾಗೇಂದ್ರ: ಬಾರ್ ಅಂಡ್ ರೆಸ್ಟೋರೆಂಟ್  ತೆರೆಯದಂತೆ ಸೂಚನೆ…

ಮೈಸೂರು,ಆ,30,2019(www.justkannada.in):  ಬಾರ್ ತೆರವುಗೊಳಿಸುವಂತೆ ಸ್ಥಳೀಯರು ಪ್ರತಿಭಟನೆ ನಡೆಸಿದ ಹಿನ್ನೆಲೆ ಸ್ಥಳೀಯರ ಒತ್ತಾಯದ  ಮೇರೆಗೆ ನಗರದ ಲಕ್ಷ್ಮೀಕಾಂತ ನಗರದಲ್ಲಿರುವ  ಬಾರ್ ಅನ್ನ ಅಬಕಾರಿ ಅಧಿಕಾರಿಗಳು ಬಂದ್ ಮಾಡಿದ್ದಾರೆ.

ಮೈಸೂರಿನ ಲಕ್ಷ್ಮೀಕಾಂತ ನಗರದಲ್ಲಿ ಬಾರ್ ತೆರೆಯದಂತೆ ಸ್ಥಳೀಯರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಅಬಕಾರಿ ಅಧಿಕಾರಿಗಳು ಹಾಗೂ ಶಾಸಕ ನಾಗೇಂದ್ರ ಭೇಟಿ ನೀಡಿ ಪರಿಶೀಲಿಸಿದರು. ನಂತರ ಸ್ಥಳೀಯರ ಒತ್ತಾಯದ ಮೇರೆಗೆ ಬಾರ್ ತೆರೆಯದಂತೆ ಶಾಸಕ ಎಲ್ . ನಾಗೇಂದ್ರ ಸೂಚನೆ ನೀಡಿದರು.

ಈ ಸಮಯದಲ್ಲಿ ಜನರ ಸಮಸ್ಯೆ ಆಲಿಸಿದ ಬಳಿಕ ಮಾತನಾಡಿದ ಶಾಸಕ ಎಲ್ ನಾಗೇಂದ್ರ, ಈ ಹಿಂದೆ ಬಾರ್ ಬಂದ್ ಮಾಡುವಂತೆ ಪ್ರತಿಭಟನೆ ಮಾಡಿದ್ವಿ. ಜನ ವಸತಿ ಪ್ರದೇಶದಲ್ಲಿ ಅವಕಾಶ ನೀಡಬಾರದು. ಬೇರೆ ಸ್ಥಳಕ್ಕೆ ಸ್ಥಳಾಂತರುಸುವಂತೆ ಒತ್ತಾಯ ಮಾಡಲಾಗಿತ್ತು. ಈ ಹಿಂದೆ ಇದ್ದ ಅಬಕಾರಿ ಅಧಿಕಾರಿಗಳು ಬಾರ್ ತೆರೆಯಲು ಅನುಮತಿ ನೀಡಿದ್ರು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿತ್ತು. ಅವರ ಆದೇಶದಂತೆ ಬಾರ್ ಮುಚ್ಚಿಸಲಾಗಿದೆ. ಬೇರೆಡೆಗಡ ಸ್ಥಳಾಂತರ ಮಾಡುವಂತೆ ತಿಳಿಸಲಾಗಿದೆ ಎಂದರು.

Key words: MLA-L. Nagendra-mysore-bar and restaurant-close