Sunday, September 20, 2026

BDA Apartments

ಸಿಎಂ, ಡಿಸಿಎಂ ದಯವಿಟ್ಟು ನನ್ನನ್ನು ಬದುಕಲು ಬಿಡಿ- ಶಾಸಕ ಜೀವರಾಜ್ BDA JK_Adv BDA Adv
Home Front Page ಸಿಎಂ, ಡಿಸಿಎಂ ದಯವಿಟ್ಟು ನನ್ನನ್ನು ಬದುಕಲು ಬಿಡಿ- ಶಾಸಕ ಜೀವರಾಜ್

ಸಿಎಂ, ಡಿಸಿಎಂ ದಯವಿಟ್ಟು ನನ್ನನ್ನು ಬದುಕಲು ಬಿಡಿ- ಶಾಸಕ ಜೀವರಾಜ್

ಬೆಂಗಳೂರು,ಮೇ,6,2026 (www.justkannada.in): ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆಮತಗಳ ಮರುಎಣಿಕೆಯಲ್ಲಿ 52 ಮತಗಳ ಅಂತರದಿಂದ ಬಿಜೆಪಿ ಜೀವರಾಜ್ ಗೆಲುವು ಸಾಧಿಸಿದ್ದು ಈ ಮಧ್ಯೆ ಅಂಚೆ ಮತಗಳನ್ನ ತಿದ್ದಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ದೂರು ದಾಖಲಿಸಿದೆ.

ಈ ಕುರಿತು ಮಾತನಾಡಿರುವ ಶಾಸಕ ಜೀವರಾಜ್, ಸಿಎಂ ಸಿದ್ದರಾಮಯ್ಯನವರೇ ಡಿಸಿಎಂ ಡಿಕೆ ಶಿವಕುಮಾರ್ ಅವರೇ ದಯವಿಟ್ಟು ನನ್ನನ್ನು ಬದುಕಲು ಬಿಡಿ  ಎಂದು ಮನವಿ ಮಾಡಿದ್ದಾರೆ.

ಇಮೇಲ್ ನಲ್ಲಿ ಆಯೋಗದಿಂದ ಪ್ರಮಾಣ ಪತ್ರ ಬಂತು   ಪ್ರಮಾಣ ಪತ್ರ ಬಂದ ಸ್ವಲ್ಪ ಹೊತ್ತಿನಲ್ಲಿ ಎಫ್ ಐಆರ್ ಹಾಕಿದ್ದಾರೆ.  ಇವರ ಅಧಿಕಾರಿಗಳೇ ಮಾತು ಕೇಳಿ ಎಫ್ ಐಆರ್ ಮಾಡಿದ್ದಾರೆ .ಕೋರ್ಟ್ ನಿಂದ ತಡೆ ತರದಿದ್ರೆ ಬಂಧಿಸುವ ಸಾಧ್ಯತೆ ಇತ್ತು. ಆಗ ಪ್ರಮಾಣ ಪತ್ರ ಕೊಡಲಿಲ್ಲ. ಈಗ ಪ್ರಮಾಣವಚನಕ್ಕೆ ಬಿಡುತ್ತಿಲ್ಲ . ಸಿಎಂ, ಡಿಸಿಎಂ ಹಿರಿಯರು ದಯವಿಟ್ಟು ನನ್ನನ್ನು ಬದುಕಲು ಬಿಡಿ ಎಂದು ಶಾಸಕ ಜೀವರಾಜ್ ಮನವಿ ಮಾಡಿದರು.

Key words: CM, DCM, please let me, live, MLA, Jeevaraj