ಜಾತಿ ಗಣತಿ: ಅಧಿಕಾರಿಗಳೇ ಪ್ರತಿಭಟಿಸಿದ್ರೂ ಅಚ್ಚರಿ ಇಲ್ಲ- ಶಾಸಕ ಜನಾರ್ಧನರೆಡ್ಡಿ

ಕೊಪ್ಪಳ,ಸೆಪ್ಟಂಬರ್,26,2025 (www.justkannada.in): ಅಭಿವೃದ್ದಿ ಕೆಲಸ ಆಗದನ್ನು ಮರೆ ಮಾಚಲು ಸಮೀಕ್ಷೆ ಮಾಡುತ್ತಿದ್ದಾರೆ. ಈ ಸರ್ಕಾರದ ಸರ್ವರ್ ಡೌನ್ ಆಗಿದೆ. ಅಧಿಕಾರಿಗಳೇ ಪ್ರತಿಭಟಿಸಿದ್ರೂ ಅಚ್ಚರಿ ಇಲ್ಲ ಎಂದು ಶಾಸಕ ಜನಾರ್ಧನ ರೆಡ್ಡಿ ಲೇವಡಿ ಮಾಡಿದರು.

ಈ ಕುರಿತು ಇಂದು ಮಾತನಾಡಿದ ಶಾಸಕ ಜನಾರ್ಧನ ರೆಡ್ಡಿ, ಸಮೀಕ್ಷೆ  ಉದ್ದೇಶ ಸರಿ ಇದ್ದಾಗ ಈ ತರಹ ಸಮಸ್ಯೆ ಆಗುತ್ತಿರಲಿಲ್ಲ ಉದ್ದೇಶ ಒಳ್ಳೆಯದು ಆಗಿದ್ದರೆ ಭಗವಂತ ಸಹಕರಿಸುತ್ತಾನೆ. ರಾಜಕೀಯಕ್ಕಾಗಿ ಮಾಡೋಕೆ ಹೊರಟಾಗ ಈ ತರಹ ಆಗುತ್ತದೆ.  ಇಡೀ ಸರ್ಕಾರದ ಸರ್ವರ್ ಡೌನ್ ಆಗಿದೆ.

ರಾಜ್ಯದಲ್ಲಿ ಅಂದುಕೊಂಡ ರೀತಿಯಲ್ಲಿ ಸಮೀಕ್ಷೆ ನಡೆಯುತ್ತಿಲ್ಲ. ಒಂದು ವಾರದಲ್ಲಿ ಸಮೀಕ್ಷೆ ಮಾಡುವ ಅಧಿಕಾರಿಗಳೇ ಪ್ರತಿಭಟಿಸಿದರೂ ಅಚ್ಚರಿ ಇಲ್ಲ.  ಎಂದು ಶಾಸಕ ಜನಾರ್ಧನ ರೆಡ್ಡಿ ವಾಗ್ದಾಳಿ ನಡೆಸಿದರು.

Key words: Caste census, officer, protest, MLA, Janardhana Reddy