Sunday, September 20, 2026

BDA Apartments

ಕೊಲೊಂಬೊ ಪ್ರವಾಸ ಬಗ್ಗೆ ತಪ್ಪು ಕಲ್ಪನೆ ಬೇಡ-ಎಂಎಲ್ ಸಿ ಬಸವರಾಜ ಹೊರಟ್ಟಿ… BDA JK_A...
Home Front Page  ಕೊಲೊಂಬೊ ಪ್ರವಾಸ ಬಗ್ಗೆ ತಪ್ಪು ಕಲ್ಪನೆ ಬೇಡ-ಎಂಎಲ್ ಸಿ ಬಸವರಾಜ ಹೊರಟ್ಟಿ…

 ಕೊಲೊಂಬೊ ಪ್ರವಾಸ ಬಗ್ಗೆ ತಪ್ಪು ಕಲ್ಪನೆ ಬೇಡ-ಎಂಎಲ್ ಸಿ ಬಸವರಾಜ ಹೊರಟ್ಟಿ…

ಹುಬ್ಬಳ್ಳಿ,ಸೆಪ್ಟಂಬರ್,12,2020(www.justkannada.in): ಈ ಹಿಂದೆ ಹೆಚ್​.ಡಿ.ಕುಮಾರಸ್ವಾಮಿ ಸಹಿತ ಜೆಡಿಎಸ್​ನ 26 ಶಾಸಕರು ಕೊಲಂಬೋಗೆ ಹೋಗಿದ್ವಿ ಎಂಬ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ,  ಕೊಲೊಂಬೊಗೆ ಹೋಗಿದ್ದು ರಾಜಕೀಯ ಉದ್ದೇಶದಿಂದ ಹೀಗಾಗಿ ತಪ್ಪು ಕಲ್ಪನೆ ಬೇಡ ಎಂದಿದ್ದಾರೆ.jk-logo-justkannada-logo

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮಗಳ ಜತೆ ಮಾತನಾಡಿದ ಬಸವರಾಜ ಹೊರಟ್ಟಿ, ಕೊಲೊಂಬೊಗೆ ಹೋಗಿದ್ದು ಗೊತ್ತು. ನನ್ನನ್ನ ಕೊಲೊಂಬೊ ಪ್ರವಾಸಕ್ಕೆ ಕರೆದಿದ್ದರು. ಆದರೆ ನಾನು ಹೋಗಲಿಲ್ಲ. ಉಳಿದವರು ಹೋಗಿದ್ದರು. ಅಲ್ಲಿಗೆ ಹೋಗಿದ್ದು ಸರಿಯೋ ತಪ್ಪೋ  ಹೆಚ್.ಡಿ ಕುಮಾರಸ್ವಾಮಿ ಹೇಳುವ ಧೈರ್ಯ ಮಾಡಿದ್ದಾರೆ. ರಾಜಕೀಯ ಉದ್ದೇಶದಿಂದ ಕೊಲೊಂಬೊಗೆ ಹೋಗಿದ್ದಾರೆ. ಹೀಗಾಗಿ ತಪ್ಪು ಕಲ್ಪನೆ ಬೇಡ ಎಂದರು.mla-jameer-ahamad-khan-colombo-tour-mlc-basavaraja-horatti

ಕ್ಯಾಸಿನೋಗೆ ತುಂಬಾ ಜನಹೋಗಿದ್ದಾರೆ. ಹೀಗಾಗಿ ಕ್ಯಾಸಿನೋ ವಿಚಾರ ಹೊರಗೆ ಬರಲಿ.  ಡ್ರಗ್ಸ್ ಕೇಸ್ ನಲ್ಲಿ ಭಾಗಿಯಾಗಿರುವ ಎಲ್ಲರ ಹೆಸರು ಹೊರಬರಲಿ ಎಂದು ಬಸವರಾಜ ಹೊರಟ್ಟಿ ಆಗ್ರಹಿಸಿದರು.

Key words: MLA-jameer ahamad khan-Colombo –tour-MLC Basavaraja horatti