ಜನವರಿ 6 ರಂದು ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ- ಶಾಸಕ ಇಕ್ಬಾಲ್ ಹುಸೇನ್

ರಾಮನಗರ,ಡಿಸೆಂಬರ್,13,2025 (www.justkannada.in):  ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡೋದು ನಮ್ಮ ಗುರಿ. ಜನವರಿ 6 ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಇಕ್ಬಾಲ್ ಹುಸೇನ್, 6 ಮತ್ತು 9 ಅವರ ಡಿಕೆ ಶಿವಕುಮಾರ್ ಅವರ ಅದೃಷ್ಟ ಸಂಖ್ಯೆ. ಇಲ್ಲಿ ಯಾವುದೇ ಬಣ ಇಲ್ಲ. ಕಾಂಗ್ರೆಸ್ ನಲ್ಲಿ ನಾವೆಲ್ಲರೂ ಒಂದೇ. ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ನಮ್ಮ ಆಸ್ತಿ. ಇಬ್ಬರೂ ನಮ್ಮ ನಾಯಕರು. ಡಿಕೆ ಶಿವಕುಮಾರ್ ಹೋರಾಟ ಶ್ರಮ ಸಂಘಟನೆಗೆ ಫಲ ನೀಡಬೇಕು ಎಂದರು.

ಜನವರಿ 6 ರಂದು ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ. ನಮಗೆ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡುವುದು ಒಂದೇ ನಮ್ಮ ಜನವರಿ 6 ರಂದು ಅಥವಾ 9 ರಂದು 99% ಡಿಕೆ ಶಿವಕುಮಾರ್ ಸಿಎಂ ಆಗುತ್ತಾರೆ.

ಅಧಿವೇಶನ ಆದ ಮೇಲೆ ಸಿಎಂ ಆಗುತ್ತಾರೆ ಅದರಲ್ಲಿ ಏನು ತಪ್ಪಿದೆ? ಡಿಕೆ ಶಿವಕುಮಾರ್ ಅವರಿಗೆ ಒಂದು ಅವಕಾಶವಿದೆ.  ಶಿವಕುಮಾರ್ ಅವರು ಮುಖ್ಯಮಂತ್ರಿ ಆಗೇ ಆಗುತ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ತಿಳಿಸಿದರು.

Key words: DK Shivakumar, will, become CM, January, MLA, Iqbal Hussain