ರಾಮನಗರ, ಅಕ್ಟೋಬರ್,8,2025 (www.justkannada.in) : ಬಿಗ್ ಬಾಸ್ ರಿಯಾಲಿಟಿ ಶೋ ಬಂದ್ ಮಾಡಿಸಿ ಕಲಾವಿದರ ಮೇಲೆ ಸೇಡು ತೀರಿಸಿಕೊಂಡ ನಟ್ಟುಬೋಲ್ಟ್ ಮಿನಿಸ್ಟರ್ ಡಿಕೆ ಶಿವಕುಮಾರ್ ಎಂದು ಜೆಡಿಎಸ್ ಮಾಡಿದ್ದ ಟ್ವೀಟ್ ಗೆ ಕಾಂಗ್ರೆಸ್ ಶಾಸಕ ಹೆಚ್.ಸಿ ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಹೆಚ್.ಸಿ ಬಾಲಕೃಷ್ಣ, ಡಿಕೆ ಶಿವಕುಮಾರ್ ನಟ್ಟುಬೋಲ್ಟು ಹೇಳಿಕೆಗೂ ಇದಕ್ಕೂ ಸಂಬಂಧವಿಲ್ಲ. ನಟ ಸುದೀಪ್ ಗೂ ಡಿಕೆ ಶಿವಕುಮಾರ್ ಗೂ ತಂದಿಕ್ಕುವುದು ಬೇಡ ಎಂದಿದ್ದಾರೆ.
ಎನ್ ಒಸಿ ಪಡೆದು ಬಿಗ್ ಬಾಸ್ ಕಾರ್ಯಕ್ರಮ ನಡೆಸಲಿ. ಏನಾದರೂ ಅವಘಡಗಳು ನಡೆದರೆ ಯಾರು ಹೊಣೆ ಆಗುತ್ತಾರೆ. ಬಿಗ್ ಬಾಸ್ ಶೋ 1 ತಿಂಗಳು ಮುಂದೂಡಿದರೆ ಪ್ರಾಣ ಹೋಗುತ್ತಾ? ಇದೇ ಭಾಗದಲ್ಲಿ ಸಿಲಿಂಡರ್ ಅವಘಡ ಆಗಿದೆ. ಜಿಲ್ಲಾಧಿಕಾರಿ 15 ದಿನ ಕಾಲಾವಕಾಶ ಕೊಟ್ಟಿರೋದು ಗೊತ್ತಿಲ್ಲ. ಡಿಕೆ ಶಿವಕುಮಾರ್ ಸಹ ಅವಕಾಶ ಕೊಡಿ ಅಂದಿದ್ದಾರೆ ಅಂದರೆ ಅವರಿಗೆ ದ್ವೇಷವಿಲ್ಲ ಎಂದು ಬಾಲಕೃಷ್ಣ ತಿಳಿಸಿದರು.
Key words: MLA, H.C. Balakrishna, Sudeep, DK Shivakumar, Big boss