ಕೆರೆ ತೆರವಿಗೆ ಕ್ರಮ ವಹಿಸದ ಜಿಲ್ಲಾಡಳಿತ ದೇವಾಲಯಗಳತ್ತ ಮಾತ್ರ ಕೈಹಾಕಿದ್ದೇಕೆ?: ಜಿಲ್ಲಾಡಳಿತದ ವಿರುದ್ಧ ಜಿಟಿಡಿ ಆಕ್ರೋಶ

ಮೈಸೂರು, ಸೆಪ್ಟೆಂಬರ್ 13, 2021 (www.justkannada.in): ಹಿಂದೂ ದೇವಾಲಯಗಳ ತೆರವು ವಿವಾದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತದ ವಿರುದ್ದ ಶಾಸಕ ಜಿ.ಟಿ.ದೇವೆಗೌಡ ಗರಂ ಆಗಿದ್ದಾರೆ.

ನಿಮ್ಮಿಂದ ಜನರು ದಂಗೆ ಏಳಬೇಕಾ..?.ಯಾವ ಜಿಲ್ಲೆಯಲ್ಲೂ ದೇವಾಲಯಗಳನ್ನ ತೆರವು ಮಾಡಿಲ್ಲ. ಆದರೆ ಮೈಸೂರಿನಲ್ಲಿ ಮಾತ್ರ ದೇವಾಲಯಗಳ ತೆರವು ಯಾಕೆ. ಅಭಿವೃದ್ದಿ ಕಾರ್ಯಗಳಿ ಅಡ್ಡಿಯಾಗಿದ್ರೆ ಮಾತ್ರ ದೇವಾಲಯಗಳನ್ನ ತೆರವು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.coming-mysore-carrying-oxygen-mla-gt-deve-gowda

ಬೇರೆ ಜಿಲ್ಲೆಗಳಲ್ಲಿ ನೀವು ದೇವಾಲಯಗಳನ್ನ ಮುಟ್ಟೋಕೆ ಆಗುತ್ತಾ? ಮೈಸೂರು ಜನ ಶಾಂತಿ ಪ್ರಿಯರು ಅಂತ ಈ ಕೆಲಸಕ್ಕೆ ಕೈ ಹಾಕಿದ್ದೀರಾ? ಸುಪ್ರೀಂ ಕೋರ್ಟ್ ಕೆರೆಗಳ ಒತ್ತುವರಿಯನ್ನ ತೆರವುಗೊಳಿಸಿ ಎಂದು ಆದೇಶ ಮಾಡಿದೆ. ಆದರೆ ನೀವು ಒಂದೇ ಒಂದು ಕೆರೆ ಒತ್ತುವರಿ ತೆರವು ಮಾಡಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರಾತನ ಕಾಲದಿಂದಲೂ ದೇವಾಲಯಗಳು ಇವೆ. ನಾವುಗಳು ಜನರ ಭಾವನೆಗಳಿಗೆ ಧಕ್ಕೆ ತರುವ ಕೆಲಸ ಮಾಡಬಾರದು. ಇದು ಸಂಪೂರ್ಣ ಅಧಿಕಾರಿಗಳ ಯಡವಟ್ಟು ಎಂದು ಜಿಲ್ಲಾಡಳಿತದ ವಿರುದ್ದ ಶಾಸಕ‌ ಜಿಟಿಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

key words: mla gt devegowda talk about mysore district administration about clearing illegal temple