ಮೈಸೂರು,ಆಗಸ್ಟ್,6,2025 (www.justkannada.in): ಮನೆಕೆಲಸದಾಕೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಶಾಸಕ ಜಿ.ಟಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ, ನ್ಯಾಯಾಲಯದ ತೀರ್ಪು ದೇವರ ತೀರ್ಪು ಇದ್ದಂತೆ. ದೇವರ ತೀರ್ಪನ್ನ ಸರಿ ತಪ್ಪು ಎಂದು ಪರಾಮರ್ಶೆ ಮಾಡುವ ಶಕ್ತಿ ಇಲ್ಲ ಎಂದರು.
ನ್ಯಾಯಾಲಯವೇ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ಕೊಟ್ಟಿದೆ. ಈ ಪ್ರಕರಣದಿಂದ ಜೆಡಿಎಸ್ ಪಕ್ಷಕ್ಕೆ ಮುಜುಗರ ಹಿನ್ನಡೆ ಏನು ಇಲ್ಲ. ಹಳೆಯ ಘಟನೆಯ ತೀರ್ಪು ಈಗ ಬಂದಿದೆ ಎಂದು ಜಿ.ಟಿ ದೇವೇಗೌಡರು ತಿಳಿಸಿದರು.
Key words: Life imprisonment, Prajwal Revanna, JDS, MLA, GT Deve Gowda