JDS ಬಿಡುವ ಪ್ರಶ್ನೆಯೇ ಇಲ್ಲ- ಶಾಸಕ ಜಿ.ಟಿ ದೇವೇಗೌಡ

ಮೈಸೂರು,ಮಾರ್ಚ್,18,2026 (www.justkannada.in):  ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಜೆಡಿಎಸ್ ಬಿಡುವ ಪ್ರಶ್ನೆಯೇ ಇಲ್ಲ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ ದೇವೇಗೌಡ ಸ್ಪಷ್ಟಪಡಿಸಿದ್ದಾರೆ.

ಇಂದು ಮಾತನಾಡಿರುವ ಶಾಸಕ ಜಿ.ಟಿ ದೇವೇಗೌಡ, ಜೆಡಿಎಸ್ ಟಿಕೆಟ್ ಕೊಡದಿದ್ದರೇ ನೀವು ಹೇಳಿದಂತೆ ಕೇಳುತ್ತೇನೆ ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ.  ಇಲ್ಲೇ ಇರುತ್ತೇನೆ ಜೆಡಿಎಸ್ ಟಿಕೆಟ್ ಕೊಡದಿದ್ದರೆ  ಕ್ಷೇತ್ರದ  ಜನ ಏನು ಹೇಳುತ್ತಾರೋ ಅದಕ್ಕೆ ಸಿದ್ದ ಎಂದು ಕ್ಷೇತ್ರದ ಜನರನ್ನುದ್ದೇಶಿಸಿ ಹೇಳಿದರು.

ನಾನು ಬೆಳೆಸಿದ್ದವರು, ದುಡ್ಡು ಮಾಡಿದವರು ನನ್ನ ವಿರುದ್ದವೇ ತಿರುಗಿ ಬಿದ್ದಿದ್ದಾರೆ.   ಇದು ಇವತ್ತಿನದ್ದಲ್ಲ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ನಿಮ್ಮ ಜೊತೆ ನಾನು ಇರುತ್ತೇನೆ.  ನಿಮ್ಮ ಆಶೀರ್ವಾದ ನನ್ನ ಮೇಲಿರಲಿ ಎಂದು ಜಿ.ಟಿ ದೇವೇಗೌಡರು ಕ್ಷೇತ್ರದ ಜನರಿಗೆ ತಿಳಿಸಿದರು.

Key words: no question, leaving, JDS, MLA, G.T. Deve Gowda