ಮೈಸೂರು ದಸರಾ: ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ ಶಾಸಕ ಜಿ.ಟಿ ದೇವೇಗೌಡ

ಮೈಸೂರು,ಸೆಪ್ಟಂಬರ್,22,2025 (www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನಾ ವೇದಿಕೆಯಲ್ಲಿ ಭಾಷಣ ಮಾಡಿದ ಜೆಡಿಎಸ್ ಶಾಸಕ ಜಿ.ಡಿ.ದೇವೇಗೌಡರು ಸಿಎಂ ಸಿದ್ದರಾಮಯ್ಯರನ್ನ ಹಾಡಿ ಹೊಗಳಿದ್ದಾರೆ.

ಇಂದು ಸಾಹಿತಿ ಬಾನು ಮುಷ್ತಾಕ್ ಅವರು ಮೈಸೂರು ದಸರಾ ಉದ್ಘಾಟನೆ ಬಳಿಕ ವೇದಿಕೆಯಲ್ಲಿ ಮಾತನಾಡಿದ ಶಾಸಕ ಜಿ.ಟಿ ದೇವೇಗೌಡ,  ಸಿಎಂ ಸಿದ್ದರಾಮಯ್ಯನವರು ರಾಜಕೀಯ ಜೀವನದಲ್ಲಿ 45 ವರ್ಷ ಪೂರೈಸಿದ್ದಾರೆ. ಇದು ಮೈಸೂರು ಜನರಿಗೆ ಹೆಮ್ಮೆಯ ವಿಷಯ  ಎಂದು ನುಡಿದರು.

ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್ ದೊಡ್ಡ ಸಾಧನೆ ಮಾಡಿದ್ದಾರೆ. ಒಬ್ಬ ಕನ್ನಡತಿಯಾಗಿ ಅಂತರಾಷ್ಟ್ರೀಯ ಮಟ್ಟದಲ್ಲೂ ಸಾಧನೆ ಮಾಡಿದ್ದಾರೆ. ಅವರು ಬಂದು ದಸರಾ ಉದ್ಘಾಟಿಸಿದ್ದು ನಮ್ಮೆಲ್ಲರಿಗೂ ಸಂಸತ ತಂದಿದೆ. ಮೈಸೂರಿನಲ್ಲಿ ದಸರಾ ದೀಪಾಲಂಕಾರ ನೋಡಲು ಎರಡು ಕಣ್ಣು ಸಾಲದು. ವೈವಿದ್ಯಮಯ ಈ ನಾಡಹಬ್ಬ ಬೇರೆಲ್ಲೂ ನಡೆಯಲ್ಲ. ಚಾಮುಂಡೇಶ್ವರಿ ಮನುಷ್ಯನಲ್ಲಿರುವ ರಾಕ್ಷಸ ಗುಣಗಳನ್ನ ನಾಶ ಮಾಡಲಿ. ಸಮಾಜದಲ್ಲಿ ಶೋಷಿತ ವರ್ಗಗಳಿಗೆ ಸಮಾನತೆ ಕೊಡಬೇಕು  ಎಂದರು.

ಈ ದೇಶದಲ್ಲಿ ಬರೀ ಜಾತಿ ಜಾತಿ ಜಾತಿ. ಅಧರ್ಮ, ಅನೀತಿಗಳನ್ನ ಸಹಿಸಿಕೊಳ್ಳಲು ಆಗುತ್ತಿಲ್ಲ . ನಾವೆಲ್ಲರೂ ಧರ್ಮದ ಪರ ನಿಲ್ಲಬೇಕು. ಬಾನು ಮುಷ್ತಾಕ್ ಉದ್ಘಾಟನೆ ವಿರೋಧಿಸಿ ನ್ಯಾಯಾಲಯಕ್ಕೂ ಹೋದರು. ಈ ರೀತಿಯ ನಡವಳಿಕೆ ಸರಿಯಲ್ಲ. ಚಾಮುಂಡೇಶ್ವರಿ ದೇವಿಗೆ ಬಾನು ಮುಷ್ತಾಕ್ ಪೂಜೆ ಮಾಡಿ ಮಂಗಳಾರತಿ ಪಡೆದಿದ್ದಾರೆ. ಎಲ್ಲರೂ ಧರ್ಮ ಬೇಧ ಭಾವ ಮರೆತು ಬದುಕೋಣ  ಎಂದು ಶಾಸಕ ಜಿಟಿ ದೇವೇಗೌಡ ಹೇಳಿದರು.

Key words: Mysore Dasara,  MLA, G.T. Deve Gowda, praises, CM Siddaramaiah