Wednesday, September 30, 2026

BDA Apartments

Home Front Page ಕಿಡ್ನಾಪ್ ಕೇಸ್ ನಲ್ಲಿ ಕೈವಾಡ ಆರೋಪ: ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟ ಶಾಸಕ ಡಿ.ರವಿಶಂಕರ್.

ಕಿಡ್ನಾಪ್ ಕೇಸ್ ನಲ್ಲಿ ಕೈವಾಡ ಆರೋಪ: ಮಾನನಷ್ಟ ಮೊಕದ್ದಮೆ ಎಚ್ಚರಿಕೆ ಕೊಟ್ಟ ಶಾಸಕ ಡಿ.ರವಿಶಂಕರ್.

ಮೈಸೂರು,ಮೇ,6,2024 (www.justkannada.in):  ಹೆಚ್ .ಡಿ ರೇವಣ್ಣ ವಿರುದ್ದದ ಕಿಡ್ನಾಪ್ ಪ್ರಕರಣದಲ್ಲಿ ಕೆ.ಆರ್ ನಗರ ಶಾಸಕನ ಕೈವಾಡವಿದೆ ಎಂದು ಆರೋಪಿಸಿದ್ದ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್ ಗೆ ಕೆ.ಆರ್ ನಗರ ಕಾಂಗ್ರೆಸ್ ಶಾಸಕ ಡಿ.ರವಿಶಂಕರ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಡಿ.ರವಿಶಂಕರ್,  ನನ್ನ ವಿರುದ್ದ ಆರೋಪಿಸಿದವರ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ . ನನಗೂ ಕಿಡ್ನಾಪ್  ಪ್ರಕರಣಕ್ಕೂ ಯಾವ ಸಂಬಂಧವಿಲ್ಲ.  ನಾನು ಆ ದಿನ ಕೆ.ಆರ್ ನಗರದಲ್ಲೇ ಇರಲಿಲ್ಲ. ಆದರೂ ಪ್ರಕರಣದಲ್ಲಿ ನನ್ನ ಹೆಸರು ತಳುಕು ಹಾಕಿ ಅಪಾದಿಸುತ್ತಿದ್ದಾರೆ ನನಗೆ ಸಂತ್ರಸ್ತೆ ಆಗಲಿ, ಅವರ ಮಗ ಆಗಲಿ ಸಂಪರ್ಕದಲ್ಲೇ ಇಲ್ಲ. ನಾನು ದೂರವಾಣಿ ಹಾಗೂ ನೇರವಾಗಿ ಎಂದೂ ಭೇಟಿಯಾಗಿಲ್ಲ. ಅಪಪ್ರಚಾರ ಮಾಡುವವರ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಕಿಡ್ನಾಪ್ ಕೇಸ್ ನಲ್ಲಿ ಕೈವಾಡ ಆರೋಪ ravishankar

ಇನ್ನು ಶಾಸಕ ರವಿಶಂಕರ್ ಎಚ್ಚರಿಕೆ ಕುರಿತು ಪ್ರತಿಕ್ರಿಯಿಸಿದ ಹಾಸನ ಜೆಡಿಎಸ್ ಜಿಲ್ಲಾಧ್ಯಕ್ಷ ಲಿಂಗೇಶ್,  ಮಾನನಷ್ಟ ಮೊಕದ್ದಮೆ ಹೂಡಲಿ ಎದರಿಸುತ್ತೇನೆ. ನನ್ನನ್ನು ಯಾರೂ ಕಿಡ್ನಪ್ ಮಾಡಿಲ್ಲ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರ ಷಡ್ಯಂತ್ರ. ಮೊದಲ ಪ್ರಕರಣದಲ್ಲಿ ಏನು ಆಗಲಿಲ್ಲ ಎಂದು 2ನೇ ಪ್ರಕರಣ ದಾಖಲಿಸಿದ್ದಾರೆ ಎಂದು ಕಿಡಿಕಾರಿದರು.

Key words: MLA D.Ravishankar,  warned, defamation, case