ಬೆಂಗಳೂರು-ಮೈಸೂರು ಹೆದ್ದಾರಿ ವ್ಯಾಪ್ತಿ ರಸ್ತೆಗಳ ದುರಸ್ತಿಗೊಳಿಸಲು ಸಂಸದ ಪ್ರತಾಪ್ ಸಿಂಹಗೆ ಗಡುವು ನೀಡಿದ ಶಾಸಕ ಸಿ.ಎಸ್ ಪುಟ್ಟರಾಜು.

ಮಂಡ್ಯ,ನವೆಂಬರ್,19,2022(www.justkannada.in): ಬೆಂಗಳೂರು-ಮೈಸೂರು ಹೆದ್ದಾರಿ ವ್ಯಾಪ್ತಿಯ ರಸ್ತೆಗಳನ್ನು ದುರಸ್ತಿಗೊಳಿಸುವಂತೆ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹಗೆ ಮೇಲುಕೋಟೆ ಜೆಡಿಎಸ್  ಶಾಸಕ ಸಿ.ಎಸ್ ಪುಟ್ಟರಾಜು ಗಡುವು ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಶಾಸಕ ಸಿ.ಎಸ್ ಪುಟ್ಟರಾಜು, ಮೈಸೂರು- ಬೆಂಗಳೂರು ಹೆದ್ದಾರಿ ವ್ಯಾಪ್ತಿಯಲ್ಲಿನ ರಸ್ತೆಗಳು ಗುಂಡಿ ಬಿದ್ದು ಹಾಳಾಗಿವೆ. ರಸ್ತೆಗಳನ್ನ ದುರಸ್ತಿಗೊಳಿಸಬೇಕು. ಇಲ್ಲದಿದ್ದರೇ ಸಂಸದರ ಮನೆ ಮುಂದೆ ಪ್ರತಿಭಟನೆಗೆ ಕೂರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

Key words: MLA -CS Puttaraju – deadline – MP Pratap Simha -repair – roads