ಮಂಡ್ಯ,ಜುಲೈ,1,2025 (www.justkannada.in): ಸಿದ್ದರಾಮಯ್ಯ ಲಕ್ಕಿ, ಲಾಟರಿ ಮುಖ್ಯಮಂತ್ರಿಯಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಿ.ಆರ್ ಪಾಟೀಲ್, ನನಗೆ ಗಾಡ್ ಫಾದರ್ ಇಲ್ಲ ಸಿದ್ದಾಂತವೇ ನನ್ನ ಗಾಡ್ ಫಾದರ್, ಜೆಡಿಎಸ್ ನಿಂದ ಬಂದ 8 ಶಾಸಕರಲ್ಲಿ ನಾನೂ ಒಬ್ಬ. ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು 8 ಜನ ಶಾಸಕರು ಕಾಂಗ್ರೆಸ್ ಗೆ ಬಂದವು. ನಾನು, ಸಿದ್ದರಾಮಯ್ಯ ಬಂದಿದ್ದು ರೈತ ಚಳುವಳಿ ಮೂಲಕ. ರೈತ ಚಳುವಳಿ ಮೂಲಕ ರಾಜಕೀಯಕ್ಕೆ ಬಂದಿದ್ದೇವೆ. ರೈತನಾಯಕ ನಂಜುಂಡ ಸ್ವಾಮಿ ನಮ್ಮನ್ನ ಹುರಿದುಂಬಿಸಿದರು. ಅವರು ಹುರಿದುಂಬಿಸದಿದ್ರೆ ಸಿದ್ದರಾಮಯ್ಯನೂ ರಾಜಕೀಯಕ್ಕೆ ಬರುತ್ತಿಲ್ಲ ಎಂದರು.
ರಾಜ್ಯದಲ್ಲಿ ಅಪಸ್ವರ ಎದ್ದಿದ್ದಕ್ಕೆ ಸುರ್ಜೇವಾಲ ಬಂದಿದ್ದಾರೆ. ಪಕ್ಷದ ಶಾಸಕರ ನೋವು ತಿಳಿಯಲು ಬಂದಿದ್ದಾರೆ. ಸುರ್ಜೇವಾಲಾರಿಗೆ ವಿವರ ನೀಡಿದ್ದೇನೆ, ನೋಟ್ ಮಾಡಕೊಂಡಿದ್ದಾರೆ. ಮುಂದೆ ಯಾವ ಕ್ರಮ ತೆಗೆದುಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟಿದ್ದು ಎಂದರು.
ನವೆಂಬರ್ ಅಕ್ಟೋಬರ್ ಆಗಸ್ಟ್ ಯಾವ ಕ್ರಾಂತಿಯೂ ಆಗಲ್ಲ. ರಾಜ್ಯದಲ್ಲಿ ಸಿಎಂ ಬದಲಾವಣೆ ಹೈಕಮಾಂಡ್ ಗೆ ಬಿಟ್ಟಿದ್ದು ಬದಲಾವಣೆ ಬಗ್ಗೆ ಮಾತನಾಡುವ ಶಕ್ತಿ ನನಗೆ ಇಲ್ಲ. ನನಗೆ ಡಿಕೆ ಶಿವಕುಮಾರ್ ಸಿಎಂ ಆಗೋದು ಗೊತ್ತಿಲ್ಲ. ನಾಯಕತ್ವ ವಿಚಾರದ ಬಗ್ಗೆ ರಣದೀಪ್ ಮಾತನಾಡಿಲ್ಲ. ಕೆಲ ವಿಚಾರದಲ್ಲಿ ಸಿದ್ದರಾಮಯ್ಯ ಮೇಲೆ ಬೇಸರ ಇದೆ. ನನ್ನ ಕ್ಷೇತ್ರಕ್ಕೆ ಅನುದಾನ ನೀಡುವ ವಿಚಾರದಲ್ಲಿ ಬೇಸರವಿದೆ. ಇದನ್ನು ಹೈಕಮಾಂಡ್ ಬಳಿ ಹೇಳಿಕೊಂಡಿಲ್ಲ ಎಂದರು.
Key words: Siddaramaiah, Lucky, Lottery, Chief Minister, MLA, BR Patil