ಬೆಂಗಳೂರು,ಜುಲೈ,23,2025 (www.justkannada.in): ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬೈರತಿ ಬಸವರಾಜು ವಿಚಾರಣೆ ಅಂತ್ಯವಾಗಿದೆ.
ಭಾರತೀನಗರ ಪೊಲೀಸ್ ಠಾಣೆಯಲ್ಲಿ ಎಸಿಪಿ ಪ್ರಕಾಶ್ ರಾಥೋಡ್ ರಿಂದ ಶಾಸಕ ಬೈರತಿ ಬಸವರಾಜು ಅವರ ವಿಚಾರಣೆ ನಡೆಯಿತು. ಸುಮಾರು ಸುಮಾರ 3 ರಿಂದ 4 ಗಂಟೆಗಳ ಕಾಲ ಭೈರತಿ ಬಸವರಾಜು ವಿಚಾರಣೆ ಎದುರಿಸಿದ್ದು ವಿಚಾರಣೆ ಮುಕ್ತಾಯವಾದ ಹಿನ್ನೆಲೆ ಹೊರಬಂದಿದ್ದಾರೆ.
ಪ್ರಕರಣ ಸಂಬಂಧ ಮೊದಲ ಆರೋಪಿ ಜಗದೀಶ್ ಜೊತೆಗಿನ ನಂಟಿನ ಬಗ್ಗೆ ಭೈರತಿ ಬಸವರಾಜು ಅವರನ್ನ ವಿಚಾರಣೆ ಮಾಡಲಾಗಿದೆ ಎನ್ನಲಾಗಿದೆ. ಇಂದು ತನಿಖಾಧಿಕಾರಿ ಎದುರು 2ನೇ ಬಾರಿಗೆ ವಿಚಾರಣೆಗೆ ಹಾಜರಾಗಿದ್ದರು.
Key words: Biklu shiva, Murder case, MLA Birathi Basavaraj, Inquiry