ಬೆಳಗಾವಿ,ಡಿಸೆಂಬರ್,9,2025 (www.justkannada.in): ನಿನ್ನೆ ಸಿಎಂ ಸಿದ್ದರಾಮಯ್ಯನವರೇ ಐದು ವರ್ಷ ಸಿಎಂ ಎಂಬ ಹೇಳಿಕೆ ನೀಡಿದ್ದ ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ವಿರುದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬೇಳೂರು ಗೋಪಾಲಕೃಷ್ಣ, ನಾಯಕರು ಶಾಂತಿ ಮಂತ್ರ ಪಠಿಸುವಾಗ ನಿವ್ಯಾಕೆ ಮಾತನಾಡುತ್ತೀರಿ? ಅವರೇ ಸುಮ್ಮನಿರುವಾಗ ನಿಮಗೆ ಮಾತನಾಡುವ ಚಟ ಯಾಕೆ? ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯತಿಂದ್ರ ಅವರು ಮಾತಾನಾಡಿದ್ದು ಉರಿಯೋ ಬೆಂಕಿಗೆ ತುಪ್ಪ ಸುರಿದಂತಾಗಿದೆ. ಇಂದಿನ ಸಿಎಲ್ ಪಿ ಸಭೆಯಲ್ಲಿ ಬಹಿರಂಗ ಚರ್ಚೆ ಮಾಡುತ್ತೇನೆ ಎಂದು ಬೇಳೂರು ಗೋಪಾಲಕೃಷ್ಣ ತಿಳಿಸಿದರು.
Key words: MLA, Belur Gopalakrishna, against, Yathindra Siddaramaiah







