ರಾಜ್ಯ ಸಚಿವ ಸಂಪುಟ ಬದಲಾವಣೆ ಬಗ್ಗೆ ಸುಳಿವು ನೀಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ವಿಜಯಪುರ,ಡಿಸೆಂಬರ್,30,2021(www.justkannada.in):  ಸಿಎಂ ಬದಲಾವಣೆ ಸದ್ಧು ಮಾಡುತ್ತಿರುವ ಹೊತ್ತಿನಲ್ಲೇ ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರಾಜ್ಯ ಸಚಿವ ಸಂಪುಟ ಬದಲಾವಣೆಯ ಸುಳಿವು ನೀಡಿದ್ದಾರೆ.

ಹೌದು ಈ ಬಗ್ಗೆ ವಿಜಯಪುರದಲ್ಲಿ ಮಾಧ್ಯಮಗಳ ಜತೆ ಮಾತನಾಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಚಿವ ಸಂಪುಟ ಬದಲಾವಣೆ ಆಗಲಿದೆ. ಆದರೆ ಸಿಎಂ ಬದಲಾವಣೆ ಆಗಲ್ಲ ಸಿಎಂ ವಿದೇಶ ಪ್ರವಾಸಕ್ಕೆ ಹೋಗಲ್ಲ. ಸಂಪುಟ, ಸಂಘಟನೆಯಲ್ಲಿ ಬದಲಾವಣೆ ಆಗಲಿದೆ. ಚುನಾವಣೆ ಪಕ್ಷ ಸಂಘಟನೆಗೆ ಸಂಪುಟ ಬದಲಾವಣೆಯಾಗಲಿದೆ ಎಂದು ಹೇಳುವ ಮೂಲಕ ಹಲವು ಸಚಿವರ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ.

ಗೃಹ ಸಚಿವ ಸ್ಥಾನದ ಆಸೆ ವ್ಯಕ್ತಪಡಿಸಿದ ಯತ್ನಾಳ್ ಗಟ್ಸ್ ಇರೋರು ಗೃಹ ಸಚಿವರಾಗಬೇಕು. ನಮ್ಮಂತವರಿಗೆ ಕೊಟ್ಟರೇ ಬರೋಬರಿ ಮಾಡ್ತೀವಿ.  ಅರಗ ಜ್ಞಾನೇಂದ್ರ ಅವರಿಗೆ ಅರಣ್ಯ ಖಾತೆ ಸೂಕ್ತ ಎಂದರು.

Key words: MLA -Basnagouda Patil Yatnal-  hinted – change – Cabinet.

ENGLISH SUMMARY…

MLA Basanagouda Patil Yatnal hints on cabinet shuffle
Vijayapura, December 30, 2021 (www.justkannada.in): BJP MLA Basanagouda Patil Yatnal has given a clue on the probability of cabinet shuffle.
Speaking to the media persons in Vijayapura today he said that there will be a cabinet shuffle shortly. Whereas he also informed that the CM will not be changed and the CM is also not going on a foreign tour. However, he said that there will be a shuffle in the cabinet.
On the occasion, Yatnal also hinted at his desire to become the home minister.
Keywords: Basanagouda Patil Yatnal/ BJP MLA/ cabinet shuffle/ hint