Friday, August 21, 2026

BDA Apartments

Home Front Page ಸಿದ್ಧರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಂಚು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ಸಿದ್ಧರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಸಂಚು- ಶಾಸಕ ಬಸನಗೌಡ ಪಾಟೀಲ್ ಯತ್ನಾಳ್.

ವಿಜಯಪುರ,ಆಗಸ್ಟ್,18,2023(www.justkannada.in):   ಸಿದ್ಧರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಡಿ.ಕೆ ಶಿವಕುಮಾರ್ ಸಂಚು ರೂಪಿಸಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸಬಾಂಬ್ ಸಿಡಿಸಿದ್ದಾರೆ.

ಇಂದು ವಿಜಯಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ಧರಾಮಯ್ಯರನ್ನ ಸಿಎಂ ಸ್ಥಾನದಿಂದ ಕೆಳಗಿಳಿಸಲು ಪ್ಲಾನ್ ಮಾಡಿದ್ದಾರೆ.  ಸಿದ್ಧರಾಮಯ್ಯರನ್ನ ಮಗಿಸಲು ಡಿಕೆ ಶಿವಕುಮಾರ್ ಪ್ಲಾನ್ ರೂಪಿಸಿದ್ದಾರೆ.  ಡಿಕೆಶಿ ಯಾರ ಮನೆಗೆ ಹೋಗಿದ್ದರೆಂದು ನನಗೆ ಗೊತ್ತಿದೆ. ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುವೆ  ಎಂದರು.

ಸಿದ್ದರಾಮಯ್ಯರನ್ನ ಡಿಕೆ ಶಿವಕುಮಾರ್ ವೀಕ್ ಮಾಡಿದ್ದಾರೆ. ಸಿದ್ಧರಾಮಯ್ಯಗೆ ಹೆಚ್ಚಿನ ಶಾಸಕರ ಬೆಂಬಲವಿದೆ. ಆದರೆ ಡಿಕೆ ಶಿವಕುಮಾರ್ ಗೆ 15 ಶಾಸಕರ ಬೆಂಬಲವಿದೆ.  5 ವರ್ಷವು ಸಿದ್ದರಾಮಯ್ಯನೇ ಸಿಎಂ  ಆಗಿರುತ್ತಾರೆ. ಡಿಕೆ ಶಿವಕುಮಾರ್ ಗೆ ಭವಿಷಯ್ದಲ್ಲಿ ಸಿಎಂ ಆಗಲು ಆಗಲ್ಲ ಎಂದು ಯತ್ನಾಳ್ ಭವಿಷ್ಯ ನುಡಿದರು.

Key words: MLA -Basanagowda Patil Yatnal –DK shivakumar- Siddaramaiah – post – CM.