ಹುಬ್ಬಳ್ಳಿ,ಮೇ,1,2023(www.justkannada.in): ಪ್ರಧಾನಿ ನರೇಂದ್ರ ಮೋದಿ ಅವರು ಸರ್ಪವಿದ್ದಂತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಳಿಕ ಸೋನಿಯಾ ಗಾಂಧಿ ವಿಷಕನ್ಯೆ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೆ ತಮ್ಮ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪ್ರಧಾನಿ ನರೇಂದ್ರ ಮೋದಿಯವರಿಗೆ ವಿಷಸರ್ಪ ಎಂದಿದ್ದಕ್ಕೆ ವಿಷಕನ್ಯೆ ಎಂದಿದ್ದೇನೆ, ನಾನು ಕ್ಷಮೆ ಕೇಳಲ್ಲ. ದೊರೆಸ್ವಾಮಿ ನಾಟಕ ಕಂಪನಿಗೆ ಕಾಂಗ್ರೆಸ್ ಏಜೆಂಟ್ ಅಂದಿದ್ದೆ. ನಾನು ರಾಜೀನಾಮೆ ಕೊಡ್ತೀನಿ, ಕ್ಷಮೆ ಕೇಳಲ್ಲ ಎಂದರು.
a
ಪ್ರಧಾನಿ ಮೋದಿಯವರನ್ನ ಕಾಂಗ್ರೆಸ್ ನವರು 91 ಸಾರಿ ಬೈದಿದ್ದಾರೆ. ಹೀಗಾಗಿ ಅವರು ವಿಷ ಸರ್ಪ ಅಂದಾಗ ನಾನು ವಿಷಕನ್ಯೆ ಎಂದಿದ್ದೇನೆ ಎಂದು ಬಸನಗೌಡ ಪಾಟೀಲ್ ಯತ್ನಾಳ ಹೇಳಿದ್ದಾರೆ.
Key words: MLA -Basanagowda Patil Yatnal -defended –Vishakanye- statement.






