ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರ: ಸಿದ್ಧರಾಮಯ್ಯ ವಿರುದ‍್ಧ ಶಾಸಕ ಯತ್ನಾಳ್ ವಾಗ್ದಾಳಿ.

ವಿಜಯಪುರ,ಆಗಸ್ಟ್,22,2022(www.justkannada.in):  ಮಾಂಸ ತಿಂದು ದೇಗುಲಕ್ಕೆ ತೆರಳಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯನವರಿಗೆ ತಾಕತ್ತಿದ್ದರೆ ಹಂದಿ ಮಾಂಸ ತಿಂದು ಮಸೀದಿಗೆ ಹೋಗಲಿ. ಆಗ ನಿಮ್ಮ ತಾಕತ್ತು ಏನೆಂಬುದು ಗೊತ್ತಾಗುತ್ತದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಹಾಕಿದ್ದಾರೆ.

ಈ ಕುರಿತು ಮಾತನಾಡಿದ ಯತ್ನಾಳ್, ನಮ್ಮಲ್ಲಿ ಒಂದೊಂದು ದೇವಸ್ಥಾನ ದರ್ಶನಕ್ಕೂ ಒಂದೊಂದು ಪದ್ಧತಿ ನಿಯಮಗಳಿವೆ. ಕೆಲವು ದೇವಸ್ಥಾನಗಳಲ್ಲಿ ಬನಿಯನ್ ಸಹ ಹಾಕದೇ ಹೋಗೋ ಸಂಸ್ಕೃತಿ ಇದೆ. ಯಾವ ಯಾವ ದೇವಸ್ಥಾನಗಳಲ್ಲಿ ಯಾವ ರೀತಿಯ ಪಾಲನೆಗಳಿವೆಯೋ ಅವುಗಳನ್ನು ಪಾಲಿಸಬೇಕು. ನೀವು ಅಂಥ ದೇವಸ್ಥಾನಕ್ಕೆ ಹೋಗಬೇಕೆಂದರೆ, ದೇವಸ್ಥಾನದ ಪಾವಿತ್ರ್ಯ ಉಳಿಯಬೇಕಾದರೆ ಆ ದೇವರಿಂದ ನಿಮಗೆ ಒಳ್ಳೆಯದಾಗಬೇಕಾದರೆ ಅಲ್ಲಿನ ಕಟ್ಟುಪಾಡುಗಳನ್ನು ನಿಯಮ ಪಾಲನೆ ಪ್ರತಿ ನಾಗರೀಕನ ಜವಾಬ್ದಾರಿ ಎಂದರು.

ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ವಿಚಾರ ಕುರಿತು ಪ್ರತಿಕ್ರಿಯಿಸಿದ ಯತ್ನಾಳ್, ಮೊಟ್ಟೆ ಎಸೆದವನಿಗೆ ನಾನು ಅಭಿನಂದನೆ ಸಲ್ಲಿಸುವೆ. ಮೊಟ್ಟೆ ಎಸೆದಿದ್ದು ಯಾವ ಪಕ್ಷದವನು ಅನ್ನೋದು ಗೊತ್ತಾಗಿದೆ. ಮೊಟ್ಟೆ ಎಸೆದವನು ಕಾಂಗ್ರೆಸ್ ​​ನವನಾಗಿದ್ದರೂ ಆತ ಹಿಂದೂ. ಹೀಗಾಗಿ ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಿದ್ದಕ್ಕೆ ಆತನಿಗೆ ನೋವಾಗಿದೆ. ಇದಕ್ಕೆ ಆಕ್ರೋಶಗೊಂಡು ಮೊಟ್ಟೆ ಎಸೆದಿದ್ದಾನೆ ಎಂದಿದ್ದಾರೆ.

Key words: MLA-Basanagowda patil Yatnal – against –formerCM-Siddaramaiah.