ವಿಜಯಪುರ,ಜನವರಿ,12,2026 (www.justkannada.in): ಬಳ್ಳಾರಿಯಲ್ಲಿ ನಡೆದ ಗಲಾಟೆ ಪ್ರಕರಣವನ್ನು ಸಿಬಿಐಗೆ ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಬಳ್ಳಾರಿ ಗಲಭೆ ಪ್ರಕರಣ ಸಿಬಿಐಗೆ ವಹಿಸಬೇಕು. ಆಡಿಯೋ, ವಿಡಿಯೋಗಳನ್ನ ಸಾಕ್ಷಿಯಾಗಿ ಪರಿಗಣಿಸುವುದಿಲ್ಲ. ಎಐ ತಂತ್ರಜ್ಞಾನದ ಮೂಲಕ ನಕಲಿ ಮಾಡಬಹುದು. ತನಿಖೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಗ ಕ್ಲೀನ್ ಚಿಟ್ ನೀಡಬಹುದು. ಹೀಗಾಗಿ ಗಲಾಟೆ ಬಗ್ಗೆ ಸಿಬಿಐ ತನಿಖೆ ಆಗಬೇಕು ಎಂದರು.
ಸಿಎಂ ಸಿದ್ದರಾಮಯ್ಯರನ್ನು ಹೊಗಳಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಶಾಸಕ ಯತ್ನಾಳ್, ಸಿದ್ದರಾಮಯ್ಯ ಕಾಂಗ್ರೆಸ್ ಸಿಎಂ ಆಲ್ಲ. ಅವರು ರಾಜ್ಯದ ಸಿಎಂ . ಸಿಎಂ ನಮ್ಮ ಕ್ಷೇತ್ರಕ್ಕೆ ಬಂದಾಗ ಗೌರವ ಸಲ್ಲಿಸಬೇಕು. ಹಾಗಾಗಿ ಸಿಎಂಗೆ ನಾನು ಗೌರವ ಸಲ್ಲಿಸಿದ್ದೇನೆ. ಇದರಿಂದ ಕೆಲವರಿಗೆ ನೋವಾದರೆ ನಾನೇನು ಮಾಡಲು ಆಗಲ್ಲ ಜನ ನನ್ನನ್ನು ಬೆಂಬಲಿಸಿದ್ದಾರೆ. ಅದು ನನ್ನ ಮೇಲಿನ ಅಭಿಮಾನ ಎಂದರು.
Key words: MLA, Basanagowda patil Yatnal, Bellary, riot case, CBI







