ಮಾಜಿ ಸಿಎಂ ಬಿಎಸ್ ವೈ ರಾಜೀನಾಮೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹ.

ಬೆಂಗಳೂರು,ಸೆಪ್ಟಂಬರ್,15,2022(www.justkannada.in):  ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ಎಫ್ ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಕೋರ್ಟ್  ಆದೇಶ ನೀಡಿರುವ ಹಿನ್ನೆಲೆ ಎಲ್ಲಾ ಸ್ಥಾನಗಳಿಗೆ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಲಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಗ್ರಹಿಸಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ ಶಾಸಕ  ಬಸನಗೌಡ ಪಾಟೀಲ್ ಯತ್ನಾಳ್, ಎಷ್ಟೇ ದೊಡ್ಡ ಹುಲಿಯಾದರೂ ಕಾನೂನು ಮುಂದೆ ಎಲ್ಲರೂ ಒಂದೆ.  ಈ ಹಿಂದೆ ಎಲ್. ಕೆ ಆಡ್ವಾಣಿ ಮೇಲೆ ಆರೋಪ ಬಂದಿತ್ತು ಈ ಸಂದರ್ಭಧಲ್ಲಿ ಎಲ್.ಕೆ ಅಡ್ವಾಣಿ ಎಲ್ಲಾ ಸ್ಥಾನಗಳಿಗೆ ರಾಜೀನಾಮೆ ನೀಡಿದ್ರು.  ರಾಜಾಹುಲಿ ಇರಲಿ ಯಾರೇ ಇರಲಿ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಎಲ್.ಕೆ ಅಡ್ವಾಣಿ, ವಾಜಿಪೇಯಿಗಿಂತ ದೊಡ್ಡವರಾ ಇವರು. ಬಿಎಸ್ ವೈ ರಾಜೀನಾಮೆ ನೀಡಿ ಎಲ್ ಕೆ ಆಡ್ವಾಣಿ ಆದರ್ಶ ಪಾಲಿಸಲಿ ಎಂದು ಯತ್ನಾಳ್ ಹೇಳಿದರು.

Key words:  MLA-Basana Gowda Patil Yatnal – resignation – former CM- BS yeddyurappa