Tuesday, October 6, 2026

BDA Apartments

immense respect BDA JK_Adv BDA Adv
Home Front Page ಕಾಂಗ್ರೆಸ್ ನವರೇ ತ್ರಿಭಾಷಾ ನೀತಿ ಜಾರಿಗೆ ತಂದಿದ್ದು: ಈಗ ದೇಶದ್ರೋಹದ ಕೆಲಸ- ಶಾಸಕ ಅಶ್ವತ್ ನಾರಾಯಣ್

ಕಾಂಗ್ರೆಸ್ ನವರೇ ತ್ರಿಭಾಷಾ ನೀತಿ ಜಾರಿಗೆ ತಂದಿದ್ದು: ಈಗ ದೇಶದ್ರೋಹದ ಕೆಲಸ- ಶಾಸಕ ಅಶ್ವತ್ ನಾರಾಯಣ್

ಬೆಂಗಳೂರು,ಮಾರ್ಚ್,30,2026 (www.justkannada.in):  ಹಿಂದಿ ಕಡ್ಡಾಯಲ್ಲ ಎಂಬ ರಾಜ್ಯ ಸರ್ಕಾರದ ಆದೇಶ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಅಶ್ವತ್ ನಾರಾಯಣ್, ಕಾಂಗ್ರೆಸ್ ನವರೇ ತ್ರಿಭಾಷಾ ನೀತಿ ಜಾರಿಗೆ ತಂದಿದ್ದು.  ಈಗ  ಹಿಂದಿ ವಿಚಾರದಲ್ಲಿ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಶ್ವಥ್ ನಾರಾಯಣ್, ತ್ರಿಭಾಷಾ ನೀತಿ ಜಾರಿಗೆ ತಂದಿದ್ದು  ಕಾಂಗ್ರೆಸ್ ನವರು.  ಈಗ ತ್ರಿಭಾಷಾ ನೀತಿ ಬೇಡ ದ್ವಿಭಾಷಾ ನೀತಿ ಬೇಕು ಅಂತಿದ್ದಾರೆ. ಸಿಎನ್ ಅಶ‍್ವಥ್ ನಾರಾಯಣ್ .  ಹಿಂದಿ ವಿಚಾರದಲ್ಲಿ ಕಾಂಗ್ರೆಸ್ ದೇಶದ್ರೋಹದ ಕೆಲಸ ಮಾಡುತ್ತಿದೆ. ತ್ರಿಭಾಷಾ ನೀತಿಯಲ್ಲಿ ಹಿಂದಿಯನ್ನೇ ಓದಬೇಕು ಅಂತೇನಿಲ್ಲ ಇಂತಹ ನಿರ್ಧಾರಗಳಿಂದ ಶಿಕ್ಷಣದಲ್ಲಿ ಗುಣಮಟ್ಟ ಹೋಗಿದೆ.  ಕಾಂಗ್ರೆಸ್ ರಾಜ್ಯವನ್ನು ಅಧೋಗತಿಗೆ ತರುತ್ತಿದೆ. ಹಿಂದಿ ತೆಗೆದು  ಹೇಗೆ ದೇಶ ಕಟ್ಟುತ್ತಾರೆ. ತಮ್ಮ ಸ್ವಾರ್ಥಕ್ಕಾಗಿ ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಆರ್ ಎಸ್ ಎಸ್ ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ ಎಂಬ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಶಾಸಕ ಅಶ್ವಥ್ ನಾರಾಯಣ್,  ಪ್ರಿಯಾಂಕ್ ಖರ್ಗೆ ಇತಿಹಾಸ ತಜ್ಞ ಎಂದು ಟಾಂಗ್ ಕೊಟ್ಟರು.  ಪ್ರಿಯಾಂಕ್ ಖರ್ಗೆ ಬಗ್ಗೆ ಸುಮ್ಮನೆ ಪ್ರಚಾರ ಕೊಡೋದು ಯಾಕೆ.  ಅವರ ಬಗ್ಗೆ ಎಷ್ಟು ಕಡಿಮೆ ಮಾತನಾಡುತ್ತೇವೋ ಅಷ್ಟು ಒಳ್ಳೆಯದು ಎಂದರು.

Key words: Congress, three-language policy, MLA, Ashwath Narayan