ಮೈಸೂರು,ಜುಲೈ,11,2025 (www.justkannada.in): ಸಿಎಂ ಬದಲಾವಣೆ ವಿಚಾರ ಚರ್ಚೆಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಅಂತಿಮ ತೆರೆ ಎಳೆದಿದ್ದರೇ ಅತ್ತ ಡಿಕೆ ಶಿವಕುಮಾರ್ ಬೆಂಬಲಿಗರೂ ಮುಂದಿನ ಅವಧಿಯಲ್ಲಿ ಸಿಎಂ ಆಗಲಿದ್ದಾರೆ ಎಂಬ ಹೇಳಿಕೆಯನ್ನ ನೀಡುತ್ತಿದ್ದಾರೆ.
ಈ ಕುರಿತು ಮಾತನಾಡಿರುವ ಜೆಡಿಎಸ್ ಶಾಸಕ ಹಾಗೂ ಮಾಜಿ ಸಚಿವ ಎ.ಮಂಜು, ಈಗ ಡಿಕೆ ಶಿವಕುಮಾರ್ ಸಿಎಂ ಆಗದಿದ್ದರೆ ಮುಂದೆ ಸಿಎಂ ಆಗಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಕಾಂಗ್ರೆಸ್ ಪಕ್ಷ ಮಧ್ಯರಾತ್ರಿ 12 ಗಂಟೆಗೆ ಹುಟ್ಟಿದ್ದು. ಹೀಗಾಗಿ ಕಾಂಗ್ರೆಸ್ ನಲ್ಲಿ ರಾತ್ರೋರಾತ್ರಿ ಏನು ಬೇಕಾದರೂ ಬದಲಾಗುತ್ತದೆ. 2013ರಲ್ಲಿದ್ದ ಸಿದ್ದರಾಮಯ್ಯ ಈಗ ಬದಲಾಗಿದ್ದಾರೆ . ಈಗ ಡಿಕೆಶಿ ಸಿಎಂ ಆಗದಿದ್ದರೆ ಮತ್ತೆ ಮುಂದೆ ಸಿಎಂ ಆಗೋದಿಲ್ಲ ಎಂದು ಶಾಸಕ ಎ.ಮಂಜು ತಿಳಿಸಿದ್ದಾರೆ.
Key words: DK Shivakumar, become, CM, future, JDS, MLA, A. Manju