ರೆಮ್ಡಿಸಿವರ್ ಬಳಕೆ ದುರುಪಯೋಗಪಡಿಸಿಕೊಂಡ ಹಿನ್ನೆಲೆ: ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು…

ಬೆಂಗಳೂರು,ಏಪ್ರಿಲ್,20,2021(www.justkannada.in):  ರೆಮ್ಡಿಸಿವರ್ ಬಳಕೆ ದುರುಪಯೋಗಪಡಿಸಿಕೊಂಡ ಹಿನ್ನೆಲೆ ವ್ಯಕ್ತಿಯ ವಿರುದ್ಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.jk

ಹೊಸಕೋಟೆ ಪಟ್ಟಣದ ಎಂ.ವಿ.ಜೆ. ಆಸ್ಪತ್ರೆಗೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಅವರು ಭೇಟಿ ನೀಡಿ, ಕೋವಿಡ್ ಸೋಂಕಿತರ ಆರೈಕೆ ಕುರಿತು ಪರಿಶೀಲಿಸಿದರು. ಈ ವೇಳೆ, ಎಂ.ವಿ.ಜೆ ಆಸ್ಪತ್ರೆಯ ಹೊರಗುತ್ತಿಗೆ ಫಾರ್ಮಸಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ದಿನೇಶ್ ಎಂಬ ವ್ಯಕ್ತಿ ಎಂ.ವಿ.ಜೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಖಾಸಗಿ ಕೋವಿಡ್ ಸೋಂಕಿತರ ಹೆಸರಲ್ಲಿ ರೆಮ್ಡಿಸಿವರ್‌ ಅನ್ನು ತರಿಸಿಕೊಂಡು, ಇತರೆ ಆಸ್ಪತ್ರೆಗಳಿಗೆ ಹಾಗೂ ವೈದ್ಯರು ಸೂಚನೆ ಇರುವ ಚೀಟಿಯುಳ್ಳವರಿಗೆ ಮಾರಾಟ ಮಾಡುತ್ತಿರುವುದು ಗಮನಕ್ಕೆ ಬಂದಿದೆ.misuse-remdisiver-use-file-case-against-person-hosakote

ಈ ಹಿನ್ನೆಲೆಯಲ್ಲಿ ಆರೋಪಿ ದಿನೇಶ್ ವಿರುದ್ಧ ಹೊಸಕೋಟೆ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 153/2021 ಅನ್ನು ದಾಖಲಿಸಲಾಗಿದೆ.

Key words: Misuse – Remdisiver-File – case- against – person-hosakote