ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಬಾವಿಯಿಂದ ಮೇಲೆತ್ತಿ ವೋಟ್ ಹಾಕಿಸಿಕೊಂಡ ಬಳಿಕ ಮತ್ತೆ ಬಾವಿಗೆ ತಳ್ಳುತ್ತಾರೆ- ಸಿಎಂ ಬೊಮ್ಮಾಯಿ ಟೀಕೆ.

0
3

ಹಾವೇರಿ,ಅಕ್ಟೋಬರ್,23,2021(www.justkannada.in): ಕಾಂಗ್ರೆಸ್ ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇನೆ ಎಂದು ಹೇಳಿಕೊಳ್ತಿದೆ. ಆದರೆ ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಬಾವಿಯಿಂದ ಮೇಲೆತ್ತಿ ವೋಟ್ ಹಾಕಿಸಿಕೊಂಡ ಬಳಿಕ ಮತ್ತೆ ಬಾವಿಗೆ ತಳ್ಳುತ್ತಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಟೀಕಿಸಿದರು.

ಹಾನಗಲ್ ಉಪಚುನಾವಣೆ ಹಿನ್ನೆಲೆ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಐದು ವರ್ಷಗಳ ಕಾಲ ಅಲ್ಪಸಂಖ್ಯಾತರನ್ನು ಬಾವಿಯಲ್ಲಿ ಇಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಅಲ್ಪಸಂಖ್ಯಾತರಿಗೆ ಹಗ್ಗ ಕೊಟ್ಟು ಮೇಲೆತ್ತುತ್ತಾರೆ. ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಂದ ಮತ ಹಾಕಿಸಿಕೊಂಡ ಬಳಿಕ ಮತ್ತೆ ಅವರನ್ನು ಬಾವಿಗೆ ತಳ್ಳುತ್ತಾರೆ ಎಂದು ಹೇಳಿದರು.

ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತೇವೆ ಎಂದು ಕಾಂಗ್ರೆಸ್ ಹೇಳಿಕೊಂಡು ತಿರುಗುತ್ತೆ, ಆದರೆ ಅಲ್ಪಸಂಖ್ಯಾತರಿಗೆ ಅನ್ಯಾಯ ಮಾಡಿದ್ದೇ ಈ ಕಾಂಗ್ರೆಸ್​. ನೀವು ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿಲ್ಲ. ಅಲ್ಪಸಂಖ್ಯಾತರೇ ಕಾಂಗ್ರೆಸ್​ ರಕ್ಷಣೆ ಮಾಡುತ್ತಿದ್ದಾರೆ. ಅಲ್ಪಸಂಖ್ಯಾತರು ಹಿಂದೆ ಸರಿದರೇ ಕಾಂಗ್ರೆಸ್ ಇರೋದಿಲ್ಲ ಎಂದು ಸಿಎಂ ಬೊಮ್ಮಾಯಿ ಹರಿಹಾಯ್ದರು.

Key words: Minority –Congress- lift – well –vote-CM basavaraja Bommai.