ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ಮತ್ತು ಯಾವುದೇ ಯೋಜನೆ ನಿಲ್ಲಿಸಲ್ಲ – ಸಿಎಂ ಬೊಮ್ಮಾಯಿ ಸ್ಪಷ್ಟನೆ.

ಬೆಂಗಳೂರು,ಮಾರ್ಚ್,29,2022(www.justkannada.in): ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ಮತ್ತು ಅಲ್ಪಸಂಖ್ಯಾತ ಸಮುದಾಯದ ಯಾವುದೇ ಯೋಜನೆ ನಿಲ್ಲಿಸಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ ನೀಡಿದರು.

ಸದನದಲ್ಲಿ ಇಂದು ಮಾತನಾಡಿದ  ಸಿಎಂ ಬಸವರಾಜ ಬೊಮ್ಮಾಯಿ, ಶಾಲಾ ಮಕ್ಕಳ ಸ್ಕಾಲರ್ ಶಿಪ್, ಹೈಯರ್ ಎಜುಕೇಶನ್ ನಿಲ್ಲಿಸುವ ಕೆಲ ಪ್ರಯತ್ನ ಈ ಹಿಂದೆ ಆಗಿತ್ತು. ಆದರೆ ಯಾವುದನ್ನೂ ಕೂಡ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.cm bommai

ಮಕ್ಕಳ ಸ್ಕಾಲರ್ ಶಿಪ್ ಗೆಂದೇ 100 ಕೋಟಿ ರೂಪಾಯಿ ಅನುದಾನವನ್ನೂ ಮಂಜೂರು ಮಾಡ್ತೇನೆ. ಯಾವುದೇ ಅಲ್ಪಸಂಖ್ಯಾತ ಮಕ್ಕಳ ಸ್ಕಾಲರ್ ಶಿಪ್ ನಿಲ್ಲಿಸೋದಿಲ್ಲ. ಮಕ್ಕಳ ವಿಷಯದಲ್ಲಿ ಯಾವುದೇ ತಾರತಮ್ಯ ಮಾಡದೇ ಅವರಿಗೆ ಸ್ಕಾಲರ್ ಶಿಪ್ ಒದಗಿಸುತ್ತೇವೆ. ಶಾದಿ ಮಹಲ್ ಮಾತ್ರ ನಿಲ್ಲಿಸುತ್ತೇವೆ, ಅದನ್ನು ಬಿಟ್ಟು ಅಲ್ಪಸಂಖ್ಯಾತರ ಯಾವುದೇ ಯೋಜನೆ ನಿಲ್ಲಿಸುವುದಿಲ್ಲ ಎಂದು  ಹೇಳಿದರು.

Key words: Minority -Children’s -Scholarship – CM Bommai